11:34 PM Thursday3 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಅಕ್ಟೋಬರ್ 22: ಫಾದರ್ ಮ್ಯಾಥ್ಯು ವಾಸ್ ಮೆಮೊರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್

14/09/2023, 22:27

ಮಂಗಳೂರು(reporterkarnataka.com): ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್ ಅವರ ಸ್ಮರಣಾರ್ಥವಾಗಿ ಮಂಗಳೂರಿನ
ಕಮ್ಯುನಿಟಿ ಎಂಪವರ್‌ಮೆಂಟ್ ಟ್ರಸ್ಟ್ , ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಮತ್ತು ಕಥೊಲಿಕ್ ಸಭಾ, ಉಡುಪಿ ಪ್ರದೇಶ ಇವರ ಸಹಯೋಗದಲ್ಲಿ ಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್ ಅಕ್ಟೋಬರ್ 22ರಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಫಾದರ್ ಮ್ಯಾಥ್ಯು ವಾಸ್ ಮೆಮೊರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್ ಸಂಚಾಲಕ ಅನಿಲ್ ಲೋಬೊ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ. 1.10.2022 ರಿಂದ 30.9.2023ರವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು ಅಕ್ಟೋಬರ್ 15, 2023 ರೊಳಗೆ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ/ವಾಟ್ಸ್ಆ್ಯಪ್ ಸಂಖ್ಯೆ :
9448379689, 9844502279 ಮೂಲಕವೂ ತಿಳಿಸಬಹುದಾಗಿದೆ.
ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್ ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟನಲ್ಲಿ ಭಾಗವಹಿಸುವ ಪಂಗಡಗಳು 15.10.2023ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಪ್ರತಿ ವಿಜೇತ ಪಂಗಡಗಳಿಗೆ ರೂ. 25000 (ಪ್ರಥಮ), ರೂ. 15000 (ದ್ವಿತೀಯ), ರೂ. 7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ
ಸೆಲೆಸ್ಟಿನ್ ಡಿಸೋಜ (ಮ್ಯಾನೇಜಿಂಗ್ ಟ್ರಸ್ಟಿ, ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್, ಮಂಗಳೂರು),
ಆಲ್ವಿನ್ ಡಿಸೋಜ( ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಮಂಗಳೂರು ಪ್ರದೇಶ),
ಸಂತೋಷ್ ಕರ್ನೆಲಿಯೊ (ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಉಡುಪಿ ಪ್ರದೇಶ),
ಮೆಲ್ವಿನ್ ಪೆರಿಸ್ (ಕೋಶಾಧಿಕಾರಿ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಶನ್, ಮಂಗಳೂರು) ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು