ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ
12/09/2023, 20:31

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿ ಕುರಿತು ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ಡಾ. ಭರತ್ ಶೆಟ್ಟಿ , ವೇದವ್ಯಾಸ ಕಾಮತ್ , ಉಪಮೇಯರ್ ಸುನೀತ, ಪಾಲಿಕೆ ಆಯುಕ್ತ ಆನಂದ ಮತ್ತಿತರರು ಪಾಲ್ಗೊಂಡಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಪ್ರೀಮಿಯಂ ಎಫ್ಎಆರ್, 15ನೇ ಹಣಕಾಸು, ಎಸ್ ಎಫ್ ಸಿ, ಮಹಾತ್ಮ ಗಾಂಧಿ ಗ್ರಾಮವಿಕಾಸ ಯೋಜನೆ ಅಡಿಯಲ್ಲಿ ಅನೇಕ ಕಾಮಗಾರಿ ನಡೆಯುತ್ತಿದ್ದು ಇದರ ಪ್ರಗತಿ ಕುರಿತಂತೆ ಚರ್ಚಿಸಲಾಯಿತು.
ಮುಂದೆ ಹಲವು ಕಾಮಗಾರಿಗಳು ನಡೆಯಲಿದ್ದು ಈ ಬಗ್ಗೆ ಪರಾಮರ್ಶ ನಡೆಸಲಾಯಿತು.