ಇತ್ತೀಚಿನ ಸುದ್ದಿ
ಎತ್ತಿನ ಗಾಡಿ ಸ್ಪರ್ಧೆ: ನೊಗ ತಲೆಗೆ ಬಡಿದು ಯುವಕ ಸ್ಥಳದಲ್ಲೇ ದಾರುಣ ಸಾವು
10/09/2023, 13:33

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಎತ್ತಿನಗಾಡಿನ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನೊಬ್ಬ ಸ್ಥಳ ಸಾವನ್ನಪ್ಪಿದ ಘಟನೆ ಅಜ್ಜಂಪುರದಲ್ಲಿ ನಡೆದಿದೆ.
ವೇಗವಾಗಿದ್ದ ಎತ್ತಿನ ಗಾಡಿ ನೊಗ ತಲೆಗೆ ಹೊಡೆದು
ಭರತ್ (25) ಎಂಬವರು ಮೃತಪಟ್ಟ ದುರ್ದೈವಿ. ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಘಟನೆ ನಡೆದಿದೆ. ಫೈನಲ್ ಸುತ್ತಿನ ಅಂತಿಮ ಸ್ಪರ್ಧೆ ಯಲ್ಲಿ ನೊಗ ಹಿಡಿಯಲು ಹೋಗಿದ್ದ ಭರತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರು ಅಜ್ಜಂಪುರ ಮೂಲದವರು.