11:03 PM Thursday27 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ತಿಪಟೂರು: ರೋಟರಿ ಬೆಂಗಳೂರು ಗುಲ್‍ಮೊಹರ್ ನಿಂದ 8 ಶಾಲೆಗಳ ದತ್ತು, 2 ಕೆರೆಗಳ ಪುನರುಜ್ಜೀವನ, ಆಸ್ಪತ್ರೆಗೆ ಇನ್‍ಕ್ಯುಬೇಶನ್ ಸೆಂಟರ್ 

26/07/2021, 12:49

ತಿಪಟೂರು(reporterkarnataka news): ತುಮಕೂರು ಜಿಲ್ಲೆಯಲ್ಲಿ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಿಪಟೂರು ನಗರ, ರೋಟರಿ ಬೆಂಗಳೂರು ಗುಲ್‍ಮೊಹರ್ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸಾಮಾಜಿಕ ಚಟುವಟಿಕೆಗಳ ಲಾಭವನ್ನು ಪಡೆಯುವ ಪ್ರಮುಖ ನಗರವಾಗಿದೆ. ಈ ಚಟುವಟಿಕೆಗಳ ಮೂಲಕ ರೋಟರಿ ಬೆಂಗಳೂರು ಗುಲ್‍ಮೊಹರ್, ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವಾಗುವ ಸುಸ್ಥಿರ ಯೋಜನೆಗಳನ್ನು ಮರಳಿ ಸಮಾಜಕ್ಕೆ ನೀಡಲಿದೆ.

ತಿಪಟೂರಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ವಿವರ ನೀಡಿದ ರೊಟೇರಿಯನ್ ಪಿಎಚ್‍ಎಫ್ ಮುರಳೀಕೃಷ್ಣನ್ “ರೋಟರಿ ಬೆಂಗಳೂರು ಗುಲ್‍ಮೊಹರ್ ತಿಪಟೂರು ಹಾಗೂ ಸುತ್ತಮುತ್ತಲಿನ ಎಂಟು ಸರ್ಕಾರಿ ಶಾಲೆಗಳನ್ನು ಮೂಲಸೌಕರ್ಯ ಅಭಿವೃಧ್ಧಿಗಾಗಿ ಆಯ್ಕೆ ಮಾಡಿಕೊಳ್ಳಲಿದೆ. ಇನ್ನೊಂದು ಮೆಗಾ ಸಾರ್ವಜನಿಕ- ಖಾಸಗಿ ಪಾಲುದಾರಿಕೆ ಯೋಜನೆಯಲ್ಲಿ ತಿಪಟೂರಿನ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ ಹಾಗೂ ಸುಮಾರು 36 ಎಕರೆ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಪರಿಸರವನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಇದರ ಜತೆಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಾ ಸಾಧನ ಸಲಕರಣೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ” ಎಂದು ವಿವರಿಸಿದರು.

ರೊಟೇರಿಯನ್ ಪಿಎಚ್‍ಎಫ್ ಮುರಳೀಕೃಷ್ಣನ್ ಮತ್ತಷ್ಟು ವಿವರ ನೀಡಿ, “ರೋಟರಿ ಬೆಂಗಳೂರು ಗುಲ್‍ಮೊಹರ್ ತಿಪಟೂರಿನ ಕೆ.ಬಿ.ಕ್ರಾಸ್ ಬಳಿ ಅರಣ್ಯ ಅಭಿವೃದ್ಧಿ ಯೋಜನೆಯನ್ನು ಕೂಡಾ ಉದ್ದೇಶಿಸಿದೆ. ಅಂತೆಯೇ 12 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ನಾಲ್ಕು ಇಂಟರ್ಯಾಕ್ಟ್ ಕ್ಲಬ್‍ಗಳನ್ನು ಕೂಡಾ ಆರಂಭಿಸಲು ಉದ್ದೇಶಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ನೆರವಾಗಲಿದೆ ಎಂದು ಬಣ್ಣಿಸಿದರು.

ರೊಟೇರಿಯನ್ ಸುಧಾರಾಣಿ ಮಾತನಾಡಿ, ಈ ಮಿಷಿನ್‍ನ ಅಂಗವಾಗಿ ಸಹ ರೊಟೇರಿಯನ್ನರು ಸಮಾಜಕ್ಕೆ ಮರಳಿ ನೀಡುವ ನಿಟ್ಟಿನಲ್ಲಿ ಈ ಉಪಕ್ರಮಗಳಿಗೆ ದೇಣಿಗೆ ನೀಡಿದ್ದಾರೆ. ಇದು ಎಲ್ಲ ಅರ್ಹ ಯೋಜನೆಗಳಿಗೆ ಸಮಪ್ರಮಾಣದ ಜಾಗರಿಕ ಅನುದಾನಕ್ಕೆ ಪೂರಕವಾಗಿರುತ್ತದೆ. ರೋಟರಿ ಬೆಂಗಳೂರು ಗುಲ್‍ಮೊಹರ್ ಈ ಯೋಜನೆಗಳ ಅನುಷ್ಠಾನಕ್ಕಾಗಿ ಕಾಲಮಿತಿಯಲ್ಲಿ ನಿಧಿ ಕ್ರೋಢೀಕರಿಸಲು ಉದ್ದೇಶಿಸಿದೆ ಎಂದು ಹೇಳಿದರು.

100 ವರ್ಷ ಹಳೆಯ ಶಾಲೆಯನ್ನು ದತ್ತು ಪಡೆಯುವ ಸಂಬಂಧ ಕೂಡಾ ಕರ್ನಾಟಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಇದರಡಿ ಪ್ರಮುಖ ರಾಚನಿಕ ಪುನರುಜ್ಜೀವನವನ್ನು ನಾಲ್ಕು ಲಕ್ಷ ರೂಪಾಯಿಗಳ ಸ್ವಯಂ ನೆರವು ನಿಧಿಯೊಂದಿಗೆ ಕೈಗೊಳ್ಳಲಿದೆ. ಇದರ ಜತೆಗೆ ರೋಟರಿ ಬೆಂಗಳೂರು ಗುಲ್‍ಮೊಹರ್ ವತಿಯಿಂದ ತಿಪಟೂರಿನಲ್ಲಿರುವ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು ಪುನರ್ ನವೀಕರಣ ಯೋಜನೆಯನ್ನೂ ಕೈಗೆತ್ತಿಕೊಂಡಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು