5:13 AM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ಕಲ್ಲಡ್ಕದಲ್ಲಿ ಸಂಭ್ರಮದ 91ನೇ ವರ್ಷದ ಮೊಸರು ಕುಡಿಕೆ ಉತ್ಸವ: ಮನಸೆಳೆದ ಶ್ರೀಕೃಷ್ಣ ಕುಚೇಲ ನೃತ್ಯರೂಪಕ

07/09/2023, 23:18

ಬಂಟ್ವಾಳ(reporterkarnataka.com): ಕಲ್ಲಡ್ಕದ ಶ್ರೀ ರಾಮ ಮಂದಿರದ 91ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರಗಿತು.
ಕಲ್ಲಡ್ಕ ಮಂದಿರದಿಂದ ಹೊರಟು ಪ್ರಮುಖ ರಸ್ತೆಯಲ್ಲಿ ಹಲವು ಟ್ಯಾಬ್ಲೋ ಸಹಿತ ಶ್ರೀಕೃಷ್ಣನ ಶೋಭಾಯಾತ್ರೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಸಂಪನ್ನಗೊಂಡಿತು.
ಶ್ರೀ ರಾಮ ವಿದ್ಯಾಕೇಂದ್ರದ ಮಕ್ಕಳು ಕೃಷ್ಣ ಯಶೋದೆಯರ ವೇಷದಲ್ಲಿ ಪಾಲ್ಗೊಂಡು ಕೃಷ್ಣಲೋಕ ಸೃಷ್ಟಿ ಸಿದರು.
ನೇತಾಜಿ ಯುವಕ ಮಂಡಲ‌ ಕಲ್ಲಡ್ಕದ ಚಕ್ರವರ್ತಿ ಶಿವಾಜಿ,ಶ್ರೀಕೃಷ್ಣ ಕುಚೇಲ ನೃತ್ಯ ರೂಪಕ ಹಾಗೂ ಶಿಲ್ಪಗೊಂಬೆ ಬಳಗದ ನವಿಲು ನೃತ್ಯ ವಿಶೇಷ ಜನಮೆಚ್ಚುಗೆ ಪಡೆಯಿತು.
ಓಂ ಶಕ್ತಿ ಬಳಗದ ಗಜಾಸುರ ವಧೆ,ಕುದ್ರೆಬೆಟ್ಟು ಮಣಿಕಂಠ ಯುವಶಕ್ತಿಯ ಅರುಣಾಸುರ ವಧೆ,ರಾಯಪ್ಪಕೋಡಿ ತ್ರಿಶೂಲ್ ಫ್ರೆಂಡ್ಸ್ ನ ವೃತ್ತಾಸುರ ವಧೆ, ಕಟ್ಟೆಮಾರು ಮಂತ್ರದೇವತಾ ಕ್ಷೇತ್ರದ ಬಂಡಾಸುರ ವಧೆ,ವಿಶ್ವ ಹಿಂದು ಪರಿಷತ್ ಭಜರಂಗ ದಳದ ಚೆಂಡೆವಾದನ, ನಾಸಿಕ್ ಬ್ಯಾಂಡ್ ಮೊದಲಾದ ಹಲವು ಸ್ತಬ್ದಚಿತ್ರಗಳು‌ಆಕರ್ಷಣೆ ನೀಡಿದವು.

    ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಶ್ರೀ ರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದ ಪ್ರಮುಖರಿದ್ದರು .
    ಶ್ರೀ ರಾಮಾಂಜನೇಯ ಸೇವಾಟ್ರಸ್ಟ್ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.
    ಮಂಗಳೂರು ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಮೊಸರು ಕುಡಿಕೆ ಮಹತ್ವ ತಿಳಿಸಿದರು.
    ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಶ್ರೀ ರಾಮ ಮಂದಿರ‌ ಆಡಳಿತ ಸಮಿತಿ‌ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.ಕೃಷ್ಣ ಪ್ಪ,ಶ್ರೀರಾಮ ಸೇವಾ ಸಮಿತಿಯ ಪುಷ್ಪರಾಜ ಶೆಟ್ಟಿ ಗಾರ್, ಕಾರ್ಯದರ್ಶಿ ಸುಜಿತ್ ಕೊಟ್ಟಾರಿ , ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಉತ್ತಮ ಪಳನೀರು ಮೊದಲಾದವರು ನೇತೃತ್ವ ವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು