10:56 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಇತ್ತೀಚಿನ ಸುದ್ದಿ

ಪೊಲೀಸ್ ಕಮಿಷನರ್ ವರ್ಗಾವಣೆಯು ಡ್ರಗ್ಸ್ ವಿರುದ್ಧ ಹೋರಾಟದಲ್ಲಿ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಹೊಡೆತ: ಶಾಸಕ ಡಾ. ಭರತ್ ಶೆಟ್ಟಿ ಕಿಡಿ

05/09/2023, 20:59

ಮಂಗಳೂರು(reporterkarnataka.com): ನಗರದಲ್ಲಿ ವ್ಯಾಪಕವಾಗಿ ಜಾಲಹರಡಿದ್ದ ಮಾದಕ ವಸ್ತುಗಳ ಮಾರಾಟ, ಸೇವನೆ, ಡ್ರಗ್ಸ್ ಪೆಡ್ಲರ್ ಗಳ ಅಟ್ಟಹಾಸವನ್ನು ಸಮಪರ್ಕವಾಗಿ ನಿಗ್ರಹಿಸಿ ನಗರವನ್ನು ಕಾನೂನು ಅಸ್ತ್ರ ಮೂಲಕ ಸ್ವಚ್ಚಮಾಡುತ್ತಿದ್ದ ಪೊಲೀಸ್ ಕಮೀಷನರ್ ಕುಲ ದೀಪ್ ಜೈನ್ ಅವರ ವರ್ಗಾವಣೆಯಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕ್ಕೆ ಹೊಡೆತ ನೀಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಕಿಡಿ ಕಾರಿದ್ದಾರೆ.
ನಮ್ಮ ಜಿಲ್ಲೆಯ ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ಸಂಕಲ್ಪದೊಂದಿಗೆ ಹೋರಾಡುತ್ತಿದ್ದ ಕಮೀಷನರ್ ಅವರ ವರ್ಗಾವಣೆ ಮಾಡಿ ಕಾಂಗ್ರೆಸ್ ಏನು ಸಾಧಿಸಿತು. ಅಕ್ರಮ ಚಟುವಟಿಕೆಗೆ ಪರೋಕ್ಷವಾಗಿ ಆಡಳಿತ ಪಕ್ಷ ಕುಮ್ಮಕ್ಕು ನೀಡುವಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಮಾದಕ ವಸ್ತುಗಳ ಜಾಲ ತಲೆ ಎತ್ತಿ ಮಕ್ಕಳ ಭವಿಷ್ಯ ಹಾಳಾದರೆ ಕಾಂಗ್ರೆಸ್ ಹೊಣೆ ಹೊರಬೇಕು ಎಂದು ಎಚ್ಚರಿಸಿರುವ ಶಾಸಕರು, ಹೊಸ ಕಮೀಷನರ್ ಅವರಿಗಾದರೂ ಪೂರ್ಣ ಸ್ವಾತಂತ್ರ್ಯ ನೀಡಿ ಈ ಹೋರಾಟ ಮುಂದುವರಿಸಲು ಎಲ್ಲಾ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಈ ಅನ್ಯಾಯದ ವಿರುದ್ದ ಹೋರಾಟ ಮಾಡಲಾಗುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು