ಇತ್ತೀಚಿನ ಸುದ್ದಿ
ಮಳೆಗಾಗಿ ವಿಶೇಷ ಪೂಜೆ: ಬರೋಬ್ಬರಿ 37 ವರ್ಷದ ಬಳಿಕ ಗಂಗೇಗಿರಿ ಬೆಟ್ಟವೇರಿದ ಹಳ್ಳಿಗರು!!
02/09/2023, 11:13

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಳೆಗಾಗಿ ಪ್ರಾರ್ಥಿಸಿ ಬರೋಬ್ಬರಿ 37 ವರ್ಷಗಳ ಬಳಿಕ ಮಲೆನಾಡಿಗರು ಎನ್. ಆರ್. ಪುರ ತಾಲೂಕಿನ ಗಂಗೇಗಿರಿ ಬೆಟ್ಟವನ್ನು ಏರಿದ್ದಾರೆ. ಇವರಲ್ಲಿ ಮೂವರು ಸಂಕಲ್ಪ ಮಾಡಿ
ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಎನ್.ಆರ್.ಪುರ ತಾಲೂಕಿನ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮದ ಜನರಿಂದ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟದಲ್ಲಿ ಪೂಜೆ ನೆರವೇರಿಸಲಾಯಿತು. 37 ವರ್ಷದ ಹಿಂದೆಯೂ ಇದೇ ರೀತಿ ಮಳೆ ಅಭಾವ ಎದುರಾಗಿತ್ತು. ಆಗ ಪೂಜೆ ನೆರವೇರಿಸಲಾಗಿತ್ತು. ಗಂಗೇಗಿರಿ ಬೆಟ್ಟದಲ್ಲಿ ಪೂಜೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಇದೆ. ಗಿರಿಯಲ್ಲಿ ಪೂಜೆ ಮಾಡಿ ಕಳಸದಲ್ಲಿ ಅಲ್ಲಿನ ನೀರು ತಂದು ಪೂಜೆ ಮಾಡಬೇಕು. 9 ದಿನ ಮಡಿಯಿಂದ ಪೂಜೆ ಮಾಡಿದರೆ ಮಳೆಯಾಗುತ್ತೆ ಅನ್ನೋ ಪ್ರತೀತಿ. ಗಂಗೇಗಿರಿಯಿಂದ ಜಲ ತಂದಿರೋ ಜನರಿಂದ 9 ದಿನ ಮಡಿ ಪೂಜೆ ನಡೆಯಲಿದೆ.