ಇತ್ತೀಚಿನ ಸುದ್ದಿ
ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರಿಂದ ಮತ್ತೆ ದಾಳಿ ಬೆದರಿಕೆ ಕರೆ: ಪೊಲೀಸ್ ಇಲಾಖೆ ಹೈ ಅಲರ್ಟ್, ಬಿಗಿ ಬಂದೋಬಸ್ತ್
01/09/2023, 12:08

ಮುಂಬೈ(reporterkarnataka.com): ನಗರದ ತಾಜ್ ಹೋಟೆಲ್ ನ ಮೇಲೆ ಪಾಕಿಸ್ತಾನದ ಉಗ್ರರು ಬಾಂಬ್ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕರೆ ಬಂದ ಹಿನ್ನೆಲೆಯಲ್ಲಿ ಹೊಟೇಲ್ ಸುತ್ತ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಪಾಕಿಸ್ತಾನದ ಇಬ್ಬರು ನಾಗರಿಕರು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಲಿದ್ದು, ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಬೆದರಿಕೆ ಕರೆ ಬಂದ ಹಿನ್ನೆಲೆ ಬೆದರಿಕೆ ಕರೆ ಬಂದ ನಂಬರನ್ನು ಟ್ರೇಸ್ ಮಾಡಿದ್ದು ಕರೆ ಬಂದ ನಂಬರ್ ಉತ್ತರ ಪ್ರದೇಶದ ಗೊಂಡ ಮೂಲದ ಜಗದಾಂಬ ಪ್ರಸಾದ್ ಸಿಂಗ್ ಎಂಬ ವ್ಯಕ್ತಿ ಎಂದು ತಿಳಿದು ಬಂದಿದೆ.
2008 ನವೆಂಬರ್ 26ರಂದು ಹೊಟೇಲ್ ತಾಜ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಉಗ್ರರ ದಾಳಿಗೆ ಸುಮಾರು 175 ಮಂದಿ ಸಾವನ್ನಪ್ಪಿದ್ದರು.