7:47 PM Monday7 - July 2025
ಬ್ರೇಕಿಂಗ್ ನ್ಯೂಸ್
Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು

ಇತ್ತೀಚಿನ ಸುದ್ದಿ

ಕುಸಿತದ ಭೀತಿಯಲ್ಲಿ ಮುಂಡ್ಕೂರು ಪಡಿತ್ತಾರ್ ಸೇತುವೆ: ಕಿತ್ತು ಹೋದ ಸಿಮೆಂಟ್, ತುಕ್ಕು ಹಿಡಿದ ಕಬ್ಬಿಣ!!

01/09/2023, 11:32

ಕಾರ್ಕಳ(reporterkarnataka.com): ಇಲ್ಲಿನ ಮುಂಡ್ಕೂರು ಗ್ರಾಮದ ಪಡಿತ್ತಾರ್ ಎಂಬಲ್ಲಿ ಸೇತುವೆ ಕಾಂಕ್ರೀಟ್ ಕಿತ್ತು ಹೋಗಿದ್ದು ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು ಕುಸಿಯುವ ಹಂತದಲ್ಲಿದೆ.
ಪಡಿತ್ತಾರು ಸೇತುವೆ ಮೇಲಿನಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಳ್ಮಣ್, ಕಿನ್ನಿಗೋಳಿ, ಮೂಡಬಿದ್ರೆ ಸಂಪರ್ಕಿಸಲು ಹತ್ತಿರದ ಹೆದ್ದಾರಿಯಾಗಿದೆ.. ಬಜಪೆ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಾವಿರಾರು ಭಕ್ತರು ಪ್ರವಾಸಿಗರು, ಪ್ರಯಾಣಿಕರು ಇದೇ ರಸ್ತೆಯಲ್ಲಿ ಸಾಗುತ್ತಾರೆ.
ಬೆಳ್ಮಣ್, ನಂದಳಿಕೆ ಸೇರಿದಂತೆ ಕಲ್ಲುಕೋರೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಜಲ್ಲಿ ಸಾಗಾಣಿಕೆ ಟಿಪ್ಪರ್ ಗಳು ಈ ರಸ್ತೆಯಲ್ಲೆ ಸಂಚರಿಸುತ್ತವೆ.
ಅಪಾಯ ಕಟ್ಟಿಟ್ಟ ಬುತ್ತಿ: ಈ ಸೇತುವೆ ಕೆಳಭಾಗದಲ್ಲಿ ಭಾಗದಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು ಕಾಂಕ್ರೀಟ್ ಕಿತ್ತು ಹೋಗಿದೆ. ಹೆಚ್ಚಿನ ಭಾರ ಹೊರುವ ಟಿಪ್ಪರ್ ಗಳು ನಿತ್ಯ ರಸ್ತೆಯಲ್ಲಿ ಸಾಗುವಾಗ ಯಾವುದೇ ಕ್ಷಣದಲ್ಲಿ ಕುಸಿತವಾಗಬಹುದು.
ತೇಪೆ ಕಾರ್ಯ: ಈ ಸೇತುವೆ ಹಳೆಯ ಸೇತುವೆಯಾಗಿದ್ದು ಅನೇಕ ವರ್ಷಗಳಿಂದ ಕಾಂಕ್ರೀಟ್ ಹಾಕಿ ತೇಪೆ ಕಾರ್ಯ ನಡೆಯುತ್ತಲಿದೆ.. ಆದರೆ ಜನ ವಾಹನಗಳ ಸಂಚಾರದಿಂದಲೆ ಮತ್ತೆ ಕಾಂಕ್ರೀಟ್ ಕಿತ್ತು ಹೋಗುತ್ತಿದೆ.ಆದರೆ ಹೊಸ ಸೇತುವೆ ನಿರ್ಮಾಣ ವಾದರೆ ಮಾತ್ರ ಅಪಘಾತ ಮುಕ್ತವಾಗಬಹುದು ಎನ್ನುವುದು ಸ್ಥಳೀಯರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಕಾಂಕ್ರೀಟ್ ಹಾಕಿ ತೇಪೆ ಕಾರ್ಯ ನಡೆಸಲಾಗಿದೆ.
ಹೊಸ ಸೇತುವೆ ನಿರ್ಮಾಣ ಮಾಡಲು ಇಲಾಖೆ ಯೊಡನೆ ಮಾತುಕತೆ ನಡೆಸಲಾಗುತ್ತಿದೆ‌ ಎಂದು
ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಮಿಥುನ್ ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು