ಇತ್ತೀಚಿನ ಸುದ್ದಿ
ಟ್ರಾಕ್ಟರ್ ಅವಘಡ: ಮಹಿಳೆ ಸಾವು; ಹಲವು ಮಂದಿಗೆ ಗಾಯ; ಸ್ವಲ್ಪದರಲ್ಲೇ ತಪ್ಪಿದ ಮಹಾ ದುರಂತ
31/08/2023, 13:10

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ದರೂರ್ ಕೃಷ್ಣಾ ನದಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಒಂದು ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟ ಮಹಿಳೆಯನ್ನು ರಾಣಿ ಕನಮಡಿ ಎಂದು ಗುರುತಿಸಲಾಗಿದೆ.
ಅಥಣಿ ತಾಲೂಕಿನ ಕಕಮರಿ ಗ್ರಾಮದಿಂದ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಭಕ್ತಾಧಿಗಳು ಟ್ರ್ಯಾಕ್ಟರ್ ನಲ್ಲಿ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ಸುಮಾರು
30 -40 ಜನ ಟ್ರ್ಯಾಕ್ಟರ್ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಎರಡು ಟ್ರೇಲರ್ ಗಳಲ್ಲಿ ಜನ ಕುಳಿತ್ತಿದ್ದರು.
ಟ್ರ್ಯಾಕ್ಟರ್ ನದಿ ಪಕ್ಕದಲ್ಲಿ ಅವಘಡಕ್ಕೀಡಾಗಿದೆ. ನದಿಯಲ್ಲಿ ಬಿದ್ದಿದ್ದರೆ ಸಾಕಷ್ಟು ಪ್ರಾಣಾಹುತಿಯಾಗುತ್ತಿತ್ತು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಅಥಣಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.