10:18 AM Monday18 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ: ಕೆಆರ್ ಎಸ್ ಪಕ್ಷದ ಪ್ರತಿಭಟನಾ ಜಾಥಾ ಕೊಟ್ಡಿಗೆಹಾರಕ್ಕೆ ಆಗಮನ

28/08/2023, 19:49

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆ.ಆರ್.ಎಸ್) ಪಕ್ಷದ ವತಿಯಿಂದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸೌಜನ್ಯಾ ಅತ್ಯಾಚಾರ ಖಂಡಿಸಿ ನ್ಯಾಯ ದೊರಕಿಸಲು ಪ್ರತಿಭಟನಾ ನಡಿಗೆ ಜಾಥಾ ಮೂರು ದಿನದಿಂದ ಆರಂಭವಾಗಿದ್ದು ಸೋಮವಾರ ಸಂಜೆ ಕೊಟ್ಟಿಗೆಹಾರ, ಬಣಕಲ್ ಗೆ ತಲುಪಿತು.


ಪ್ರತಿಭಟನಾ ಜಾಥಾದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ ‘ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ನಡೆದು 11 ವರ್ಷವಾದರೂ ಈವರೆಗೆ ಕೊಲೆ ಮಾಡಿದವರನ್ನು ಸರ್ಕಾರ ಬಂಧಿಸಲಾಗಿಲ್ಲ.ಅಮಾಯಕನನ್ನೂ ಬಂಧಿಸಿ ಬಿಡಲಾಗಿದೆ. ಬಡವರ ಹೆಣ್ಣು ಮಕ್ಕಳ ಅತ್ಯಾಚಾರ ಷೋಷಣೆ ನಿಲ್ಲಬೇಕು. ಅತ್ಯಾಚಾರವನ್ನು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವ ಒತ್ತಡಕ್ಕೂ ಮಣಿಯದೇ ಮರು ತನಿಖೆಗೆ ಆದೇಶಿಸಬೇಕು. ಸೌಜನ್ಯ ಮಹಿಳಾ ಆಯೋಗ ಸ್ಥಾಪನೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ತನಿಖಾಧಿಕಾರಿ ವಿರುದ್ದ ತನಿಖೆಯಾಗಬೇಕು. ಪ್ರಕರಣದ ದಾರಿ ತಪ್ಪಿಸಿದ ಪೊಲೀಸರ ಕ್ರಮಕ್ಕೂ ಶಿಕ್ಷೆಯಾಗಬೇಕು. ಎಲ್ಲಾ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ಸಂಬಂಧಿತ ಪ್ರಕರಣಗಳು ಪ್ರಾಮುಖ್ಯತೆ ಮೇಲೆ ನಿಗದಿತ ಸಮಯದಲ್ಲಿ ಬಗೆಹರಿಯಬೇಕು. ಮಕ್ಕಳ ಮತ್ತು ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ಸಂಸ್ಥೆ ರಚನೆಯಾಗಬೇಕು. ಸೌಜನ್ಯ ನಮ್ಮೆಲ್ಲರ ಮಗಳೆಂದು ಭಾವಿಸಿ ಸೌಜನ್ಯ ಪರ ಎಲ್ಲರೂ ಧ್ವನಿಗೂಡಿಸಬೇಕು.ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸುವಂತಾಗಬೇಕು’ ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾ ನಡಿಗೆ ಜಾಥಾದಲ್ಲಿ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಬೆಳಿಗ್ಗೆಯಿಂದ ಸಂಜೆವರೆಗೆ ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಮೌನಾವೃತ ಕೈಗೊಂಡಿದ್ದು ಜಾಥಾದಲ್ಲಿ ಸೌಜನ್ಯಗೆ ನ್ಯಾಯ ಒದಗಿಸುವಂತೆ ಜನರಿಗೆ ನಮಸ್ಕರಿಸಿದರು. ಜಾಥಾದಲ್ಲಿ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಸಿ.ಎನ್.ದೀಪಕ್, ರಘುಪತಿ, ಮಲ್ಲಿಕಾರ್ಜುನ್ ಭಟ್ರಳ್ಳಿ,ಆರೋಗ್ಯಸ್ವಾಮಿ, ಜೀವನ್,ಎನ್ ಮೂರ್ತಿ,ರವಿಕುಮಾರ್, ಮೋಹನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು