ಇತ್ತೀಚಿನ ಸುದ್ದಿ
ರಾಜ್ಯದ ಅತ್ಯಂತ ಎತ್ತರದ ಬೆಟ್ಟ ಮುಳ್ಳಯ್ಯನಗಿರಿಯಲ್ಲಿ ತಿರಂಗ ಹಾರಿಸಿದ ಯೋಧರ ತಂಡ: ಕರ್ನಲ್ ರಣವೀರ್ ಸಿಂಗ್ ನೇತೃತ್ವದ 14 ಮಂದಿ ಸೈನಿಕರು
27/08/2023, 19:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕರ್ನಲ್ ರಣವೀರ್ ಸಿಂಗ್ ನೇತೃತ್ವದ 14 ಜನ ಯೋಧರ ತಂಡ ರಾಜ್ಯದ ಅತ್ಯಂತ ಎತ್ತರದ ಪ್ರದೇಶದಲ್ಲಿ ಭಾನುವಾರ ಧ್ವಜಾರೋಹಣ ಮಾಡಿತು.
ರಾಷ್ಟ್ರೀಯ ಪರ್ವತಾರೋಹಣ-ಸಾಹಸ ಕ್ರೀಡೆಗಳ ಸಂಸ್ಥೆಯಿಂದ ಈ ಧ್ವಜಾರೋಹಣ ನಡೆಸಲಾಯಿತು. ಯೋಧರು ಭಾನುವಾರ ಚಾರಣ ತೆರಳಿ ಮುಳ್ಳಯ್ಯನಗಿರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ದೇಶದ ಎಲ್ಲ ರಾಜ್ಯಗಳ ಎತ್ತರದ ಶಿಖರದಲ್ಲಿ ಯೋಧರು ಧ್ವಜಾರೋಹಣ ಮಾಡಿದ್ದಾರೆ. 28 ರಾಜ್ಯಗಳ ಪೈಕಿ 17 ರಾಜ್ಯಗಳ ಶಿಖರದಲ್ಲಿ ರಾಷ್ಟ್ರಧ್ವಜವನ್ನು ಸೈನಿಕರ ತಂಡ ನೆರವೇರಿಸಿದೆ.
14 ಜನರೂ ಕೈಯಲ್ಲಿ ತಿರಂಗ ಹಿಡಿದು ಮುಳ್ಳಯ್ಯನಗಿರಿಯಲ್ಲಿ ಧ್ವಜಾರೋಹಣ ಮಾಡಿದರು.
ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ.