2:22 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಕಿಡ್ನಾಪ್ ಮತ್ತು ಸುಲಿಗೆ ಪ್ರಕರಣ: ಓರ್ವ ಆರೋಪಿ ಪೊಲೀಸ್ ವಶಕ್ಕೆ: ಸೊತ್ತು ಸ್ವಾಧೀನ; ಇನ್ನೊರ್ವನ ಹುಡುಕಾಟ

26/08/2023, 16:49

ಮಂಗಳೂರು(reporterkarnataka.com): ಕಿಡ್ನಾಪ್ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದ ಆರೋಪಿತನಿಂದ ಬೆಲೆ ಬಾಳುವ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
2023, ಮೇ 12ರಂದು 10.45 ಗಂಟೆಯಿಂದ 14.30ರ ಸಮಯದಲ್ಲಿ ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಇರುವ ಮಜೀಬ್ ಸೈಯದ್ ಅವರನ್ನು ಅವರ ಪರಿಚಯದ ನೌಪಾಲ್ ಮತ್ತು ಪುಚ್ಚ ಎಂಬವರುಗಳು ಜೊತೆಯಾಗಿ ಸೇರಿ ಕಿಡ್ನಾಪ್ ಮಾಡಿ ಪಿಸ್ತೂಲ್ ತೋರಿಸಿ ಮುಜೀಬ್ ಸೈಯದ್ ಅವರಿಂದ 5 ಲಕ್ಷ ರೂಪಾಯಿ ನಗದು ಮತ್ತು ಒಂದು ಕಾರು ನೀಡುವಂತೆ ಒತ್ತಡವೇರಿದ್ದರು. ಅವರು ಕೊಡಲು ನಿರಾಕರಿಸಿದಾಗ ಅವರನ್ನು ಕಿಡ್ನಾಪ್ ಮಾಡಿ ಮುಜೀಬ್ ಸೈಯದ್ ಅವರು ಉಪಯೋಗಿಸುತ್ತಿದ್ದ ಕೆಎ 19 ಎಂ. ಎಲ್ 4730 ನೊಂದಣಿ ಸಂಖ್ಯೆಯ ಕಾರು ಮತ್ತು ಅವರಲ್ಲಿದ್ದ 9535037501 ಮತ್ತು 9901475081 ನಂಬ್ರದ ಸೀಮ್ ಇದ್ದ ವಿವೋ ಕಂಪನಿಯ ಮೊಬೈಲ್ ಸೆಟ್ -01 ಮತ್ತು ನಗದು ಹಣ 18000 ರೂಪಾಯಿ ಹಾಗೂ ಮುಜೀಬ್ ಸೈಯದ್ ಅವರ ಮಗಳ ಕೈಯಲ್ಲಿದ್ದ OPPO ಕಂಪನಿಯ ಮೊಬೈಲ್ ಸೆಟ್
ಸುಲಿಗೆ ಮಾಡಿಕೊಂಡು ಮುಜೀಬ್ ಸೈಯದ್‌ ಅವರನ್ನು ಎಸ್. ಎಲ್. ಮಥಾಯಸ್ ರಸ್ತೆ, ಪನ್ನೀರ್, ಕಂಕನಾಡಿ, ಪಂಪುವಲ್, ಉಜ್ಜೋಡಿ, ಜಪ್ಪಿನಮೊಗರು, ಕರ್ಬಿಸ್ಥಾನ ರಸ್ತೆ ಮುಂತಾದ ಕಡೆಗಳಲ್ಲಿ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪಿಸ್ತೂಲ್ ತೋರಿಸಿ ವಾಪಾಸು 5 ಲಕ್ಷ ರೂಪಾಯಿ ನಗದು ಹಣ ಮತ್ತು ಒಂದು ಕಾರು ನೀಡುವಂತ ಒತ್ತಡವೇರಿರುತ್ತಾರೆ. ನಂತರ ವಾಪಾಸು ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ಮೆಂಟ್ ಬಳಿಗೆ ವಾಪಾಸು ಕರೆದುಕೊಂಡು ಬಂದಿದ್ದರು. ಅಲ್ಲಿ ಮುಜೀಬ್ ಸೈಯದ್ ಅವರ ಪತ್ನಿ ಮಕ್ಕಳನ್ನು ಕಾರಿನ ಹತ್ತಿರಕ್ಕೆ ಬರಮಾಡಿಸಿ ಅವರನ್ನು ಕೂಡ ಕಾರಿನಲ್ಲಿ ಕುಳ್ಳಿತುಕೊಳ್ಳುವಂತೆ ಒತ್ತಾಯಪಡಿಸಿದ್ದರು. ಈ ಸಂದರ್ಭ ಮುಜೀಬ್ ಸೈಯದ್ ಅವರು ಹೆಂಡತಿ ಮಕ್ಕಳನ್ನು ಕಾರಿನಲ್ಲಿ ಕುಳ್ಳಿರಿಸುವ ನಟನೆ ಮಾಡಿ ಕಾರಿನಿಂದ ಇಳಿದು ಕಾರಿನ ಹಿಂದಿನ ಸೀಟ್ ನಲ್ಲಿದ್ದ ತನ್ನ ಮಗಳನ್ನು ಕಾರಿನ ಡೋರ್ ತೆಗೆದು ಕಾರಿನಿಂದ ಏಕಾಏಕಿ ಸಡನ್ ಆಗಿ ಕೆಳಗೆ ಇಳಿಸಿದ್ದರು.
ವಾಪಾಸು ಆರೋಪಿ ನೌಪಾಲ್ ಎಂಬಾತನು ಮುಜೀಬ್‌ ಸೈಯದ್‌ ಮತ್ತು ಮನೆಯವರನ್ನು ಪುನ: ಪುನ: ಕಾರಿನಲ್ಲಿ ಕುಳ್ಳಿತುಕೊಳ್ಳಲು ಒತ್ತಾಯ ಮಾಡಿದಾಗ ಅವರುಗಳು ಕುಳಿತುಕೊಳ್ಳದೆ ಇದ್ದಾಗ ನೌಪಾಲ್ ಯಾನೆ ಟೊಪ್ಪಿ ನೌಪಾಲ್ ಮತ್ತು ಪುಚ್ಚ ಸ್ಥಳದಿಂದ ಮುಜೀಬ್ ಸೈಯದ್ ಅವರ ಕೆಎ 19 ಎಂ. ಎಲ್ 4730 ಕಾರಿನೊಂದಿಗೆ ಪರಾರಿಯಾಗಿರುತ್ತಾರೆ. ಘಟನೆ ಬಗ್ಗೆ ಮುಜೀಬ್ ಸೈಯದ್ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿಗಳು ಸುಲಿಗೆ ಮಾಡಿದ ಕೆಎ 19 ಎಂ. ಎಲ್ 4730 ಕಾರನ್ನು ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್‌ ಬಳಿಯಿಂದ ದಿನಾಂಕ 12-05-2023 ರಂದು ರಾತ್ರಿ 8-30 ಗಂಟೆಗೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು, ಕಾರನ್ನು ನ್ಯಾಯಾಲಯದ ಆದೇಶದಂತೆ ವಾರೀಸುದಾರಿಗೆ ಬಿಟ್ಟುಕೊಡಲಾಗಿದೆ.
ಮಂಗಳೂರು ನಗರದ ಗ್ರಾಮಾಂತರ ಪೊಲೀಸ್‌ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್ ಯಾನೆ ಟೊಪ್ಪಿ ನೌಫಾಲ್( 31)
ಎಂಬಾತನನ್ನು ಆಗಸ್ಟ್ 24 ರಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸ್‌ ನಿರೀಕ್ಷಕರಾದ ಲೋಕೇಶ್ ಎ.ಸಿ. ಅವರು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಿದಾಗ ಸುಲಿಗೆ ಮಾಡಿದ ಎರಡು ಮೊಬೈಲ್ ಸೆಟ್, ಕಾರಿನ ಕೀ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟಿಕೆ ಪಿಸ್ತೂಲ್ ನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಪ್ಪೋಪ್ಪಿಕೊಂಡಿದ್ದು ಅವುಗಳನ್ನು ಆಗಸ್ಟ್ 25-ರಂದು ಸ್ವಾಧೀನಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟು ಮಂಗಳೂರು ನಗರದ ಪಡೀಲ್ ನಾಗುರಿ ಕಡೆಯ ಮೊಹಮ್ಮದ್ ನಿಶಾಕ್ ಯಾನೆ ಪುಚ್ಚ ಎಂಬಾತನು ತಲೆಮರೆಸಿಕೊಂಡಿರುತ್ತಾನೆ.
ಪತ್ತೆ ಕಾರ್ಯಾಚಾರಣೆ: ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಉಪ ಪೊಲೀಸ್‌ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ , ಉಪಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್, ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಮಹೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಲೋಕೇಶ್ ಎ.ಸಿ. ಪೊಲೀಸ್ ಉಪನೀಕ್ಷಕರುಗಳಾದ ಮನೋಹರ್ ಪ್ರಸಾದ್ ಪಿ., ಅನಂತ ಮುರ್ಡೇಶ್ವರ್, ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು