ಇತ್ತೀಚಿನ ಸುದ್ದಿ
3ಎ ಕಾಂಪೋಸಿಟ್ಸ್ ಪ್ರಮುಖ ಬ್ರಾಂಡ್ ALUCOBOND ಬಣ್ಣಗಳು, ಸರ್ಫೇಸ್‌ಗಳ ಸರಣಿಗೆ ಚಾಲನೆ
25/08/2023, 10:34
ಬೆಂಗಳೂರು(reporterkarnataka.com): ಉನ್ನತ ಗುಣಮಟ್ಟದ ಮತ್ತು ನವೀನ ಅಲ್ಯೂಮಿನಿಯಂ ಸಂಯುಕ್ತ ಸಾಮಗ್ರಿಗಳ ಜಾಗತಿಕ ಉತ್ಪಾದಕರಾದ ಸ್ವಿಸ್ ದೇಶದ ಪ್ರಮುಖ ಕಂಪನಿಯಾಗಿರುವ 3A ಕಾಂಪೋಸಿಟ್ಸ್, ತನ್ನ ಪ್ರಮುಖ ಬ್ರ್ಯಾಂಡ್ ALUCOBOND ಅನನ್ಯ ಮತ್ತು ಕ್ಲಾಸಿಕ್ ಶ್ರೇಣಿಯ ಬಣ್ಣಗಳು ಮತ್ತು ಮೇಲ್ಮೈಗಳಿಗೆ ಚಾಲನೆ ನೀಡಿ, ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ.
ಹೊಸ ಮೂರು ಅರ್ಪಣೆಗಳು ಇಂತಿವೆ: ಕಲರ್‌ಸ್ಕೇಪ್ಸ್, ಕಾಂಕ್ರೀಟ್ ಮತ್ತು ಗ್ರೋವ್.
ಈ ಮೂರು ಸರಣಿಗಳ ಸೇರ್ಪಡೆಯೊಂದಿಗೆ, ALUCOBOND ಗ್ರಾಹಕರಿಗೆ ಆಯ್ಕೆ ಮಾಡಲು 40ಕ್ಕೂ ಹೆಚ್ಚು ಬಣ್ಣಗಳ ಹೊಸ, ಆಕರ್ಷಕ ಶ್ರೇಣಿಯನ್ನು ಪ್ರಸ್ತುತಪಡಿಸಿದೆ. ದೀರ್ಘಾವಧಿಯ ವಾಸ್ತುವಿನ್ಯಾಸದ ಬಳಕೆಗಳಿಗೆ ಸರ್ಫೇಸ್ ಕೋಟಿಂಗ್ ಮತ್ತು ಬಣ್ಣಗಳ ಅತ್ಯುತ್ತಮ ಶ್ರೇಣಿಯನ್ನು ಪರಿಚಯಿಸುವ ಮೂಲಕ ALUCOBOND ವಾಸ್ತುಶಿಲ್ಪಿಗಳಿಗೆ ತಮ್ಮ ವಿನ್ಯಾಸಗಳಿಗೆ ವಿಶಿಷ್ಟ ಗುರುತನ್ನು ಕೊಡಿಸಿದೆ. ಭಾರತದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರೀಮಿಯಂ ವಾಣಿಜ್ಯ ಮತ್ತು ವಸತಿ ಕಟ್ಟಡಗಳು, ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಮತ್ತು ಸಂಸ್ಥೆಗಳಿಗಾಗಿ ಈ ಹೊಸ ಶ್ರೇಣಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ, ಕಂಪನಿಯು ತನ್ನ ಸಮರ್ಪಿತ ಮತ್ತು ಸುಸ್ಥಾಪಿತ ಮಾರಾಟ ಜಾಲದ ಮೂಲಕ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ವಾಸ್ತುಶಿಲ್ಪಿಗಳು, ಡೆವಲಪರ್‌ಗಳು ಮತ್ತು ಫ್ಯಾಬ್ರಿಕೇಟರ್‌ಗಳನ್ನು ಗುರಿಯಾಗಿಸುತ್ತಿದೆ. 3A ಕಾಂಪೋಸಿಟ್ಸ್ 2007 (೨00೭) ರಲ್ಲಿ ಪುಣೆ ಸಮೀಪ ಸ್ಥಾಪಿಸಿರುವ ಸ್ವಂತ ಸುಸಜ್ಜಿತ ಸೌಲಭ್ಯದಲ್ಲಿ ACP ವಸ್ತುಗಳನ್ನು ತಯಾರಿಸುತ್ತಿದ್ದು, ಪ್ರಧಾನ ಮಂತ್ರಿಗಳ ‘ಮೇಕ್ ಇನ್ ಇಂಡಿಯಾ‘ ಉಪಕ್ರಮಕ್ಕೆ ಪೂರಕವಾಗಿದೆ.
ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿದ 3A ಕಾಂಪೋಸಿಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರು ಹಾಗೂ CEO ರಂಜೀತ್ ಶರ್ಮಾ ಅವರು, “ACP ಯನ್ನು ಸ್ಥಾಪಿಸುವಾಗ ನಮ್ಮ ಪ್ರಮುಖ ಬ್ರ್ಯಾಂಡ್ ALUCOBOND ವಾಸ್ತುಶಿಲ್ಪಿಗಳ ಆದ್ಯತೆಯ ಆಯ್ಕೆಯಾಗಿದೆ. ವಾಸ್ತುಶಿಲ್ಪಿಗಳು ತಮ್ಮ ಸೃಜನಶೀಲತೆಯನ್ನು ಉತ್ಕೃಷ್ಟವಾಗಿ ಬಳಸಲು ಮತ್ತು ಆಧುನಿಕ ಮತ್ತು ಆಕರ್ಷಕ ಶೈಲಿಯ ಕಟ್ಟಡಗಳಿಗೆ ಸುರಕ್ಷಿತ, ಅಗ್ನಿ ನಿರೋಧಕ ಸಾಮಗ್ರಿಗಳನ್ನು ಬಳಸುವಂತಾಗಲು ನಾವು ನಮ್ಮ ಶ್ರೇಣಿಯಲ್ಲಿ ಬಣ್ಣಗಳ ಮೂರು ಹೊಸ ಸರಣಿಯನ್ನು ಪರಿಚಯಿಸಿದ್ದೇವೆ. ಇದು ವಿನ್ಯಾಸ ಪ್ರವೃತ್ತಿಯ ಹೊಸ ತರಂಗವನ್ನು ಮೂಡಿಸುತ್ತದೆ ಮತ್ತು ವಾಸ್ತುಶಿಲ್ಪಿಗಳು ಸುರಕ್ಷತೆಯೊಂದಿಗೆ ಸೊಗಸಾದ ವಿನ್ಯಾಸವನ್ನು ಸಾಧಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಈ ಮೂರು ಬಣ್ಣಗಳ ಹೊಸ ಸರಣಿಯು ಸಂಪೂರ್ಣವಾಗಿ ಅಸಾಮಾನ್ಯ ಎಂದು ಬಣ್ಣಿಸಿದ 3A ಕಾಂಪೋಸಿಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಭಾರತ ಮತ್ತು ಆಗ್ನೇಯ ಏಷ್ಯಾ ವಲಯದ ಮಾರ್ಕೇಟಿಂಗ್ ಮುಖ್ಯಸ್ಥ ಅಮರ್ ಕಿರಾಲ್ ಅವರು, “ದಿಟ್ಟತನ ಮತ್ತು ಜಾಣ್ಮೆಯಿಂದ ರೂಪಿಸಲಾದ ಈ ಸರಣಿಯು ಎಚ್ಚರಿಕೆಯಿಂದ ಪರಿಶೋಧಿಸಿದ ಬಣ್ಣಗಳನ್ನು ಹೊಂದಿದ್ದು, ವಾಸ್ತುಶಿಲ್ಪಿಗಳ ಸೃಜನಶೀಲತೆಯನ್ನು ಬಲಪಡಿಸಿ, ಅವರ ವಿನ್ಯಾಸಗಳನ್ನು ಅತ್ಯಾಕರ್ಷಕವಾಗಿಸುತ್ತದೆ. ಲೋಹದ, ಘನ ಮತ್ತು ರೋಮಾಂಚಕ ಬಣ್ಣಗಳ ಸರಿಯಾದ ಸಂಯೋಜನೆಯು ವಾಸ್ತುಶಿಲ್ಪದ ಹಲವು ಅಂಶಗಳು ಎದ್ದು ಕಾಣುವಂತೆ ಮಾಡುತ್ತದೆ. ಇದು ವಿನ್ಯಾಸಗಳ ಪ್ರಮುಖ ಕ್ಷೇತ್ರಗಳ ನಿರ್ದಿಷ್ಟ ಅಂಶಗಳನ್ನು ಹೈಲೈಟ್ ಮಾಡಲು ವಾಸ್ತುಶಿಲ್ಪಿಗಳಿಗೆ ನಮ್ಯತೆಯನ್ನು ನೀಡುತ್ತದೆ” ಎಂದು ವಿವರಿಸಿದರು.
ಲೋಹ, ಘನ ಬಣ್ಣಗಳು ಮತ್ತು ಮೇಲ್ಮೈಗಳ ‘COLOURSCAPES’ ಶ್ರೇಣಿಯೊಂದಿಗೆ, ವಾಸ್ತುಶಿಲ್ಪಿಗಳು ಸೊಗಸಾದ ವಿನ್ಯಾಸಗಳನ್ನು ರಚಿಸಲು, ಬಣ್ಣಗಳ ಪ್ಯಾಲೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಯೂಮಿನಿಯಂ ಸಂಯುಕ್ತ ವಸ್ತುವಿನಲ್ಲಿ ಕಾಂಕ್ರೀಟ್ ಮಾದರಿಯ ನೋಟವನ್ನು ಚಿತ್ರಿಸುವ ಮೂಲಕ, ALUCOBOND ‘ಕಾಂಕ್ರೀಟ್‘ ಛಾಯೆಗಳ ಸರಣಿಯನ್ನು ಪರಿಚಯಿಸಿದ್ದು, ಇದನ್ನು ಪ್ರಮುಖವಾಗಿ ಮುಂಭಾಗದ ಹೊದಿಕೆಗಳಿಗೆ ಬಳಸಬಹುದು. ಕಾಷ್ಟ ಶಿಲ್ಪದ ಸೌಂದರ್ಯವನ್ನು ಮುನ್ನೆಲೆಗೆ ತರುವುದಕ್ಕಾಗಿ ALUCOBOND ‘ಗ್ರೋವ್’ ಎಂಬ ಒಂದು ಅನನ್ಯ ಸರಣಿಯನ್ನು ಪರಿಚಯಿಸಿದೆ. ನೈಸರ್ಗಿಕ ಮರದ ಬದಲಿಗೆ ಅಲ್ಯೂಮಿನಿಯಂ ಸಂಯುಕ್ತ ವಸ್ತುವನ್ನು ಬಳಸಲು ವಿನ್ಯಾಸಕಾರನಿಗೆ ಇದು ಸ್ವಾಯತ್ತತೆಯನ್ನು ನೀಡುತ್ತದೆ.
ಭಾರತದಲ್ಲಿ, ALUCOBOND ಅನ್ನು ಸುಮಾರು 25 (೨೫) ವಿಮಾನ ನಿಲ್ದಾಣಗಳು, IIT ಗಳಂತಹ ಪ್ರಧಾನ ಶೈಕ್ಷಣಿಕ ಸಂಸ್ಥೆಗಳು, ನೂರಾರು ಪ್ರಮುಖ ಪೆಟ್ರೋಲ್ ಪಂಪ್‌ಗಳು, ನವದೆಹಲಿಯ ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂತಾದವುಗಳ ವಿನ್ಯಾಸದಲ್ಲಿ ಬಳಸಲಾಗಿದೆ. ಇತ್ತೀಚಿನ ಹೆಗ್ಗುರುತು ಯೋಜನೆಗಳಾದ ಸಬರಮತಿ ಹೈಸ್ಪೀಡ್ ರೈಲು ಟರ್ಮಿನಲ್, ನವದೆಹಲಿಯ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ & ಎಕ್ಸ್‌ಪೋ ಸೆಂಟರ್ (IICEC), ಜಿಯೋ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಡ್ರೈವ್ ಇತ್ಯಾದಿಗಳ ನಿರ್ಮಾಣದಲ್ಲಿ ALUCOBOND ಅನ್ನು ಬಳಸಲಾಗಿದೆ.
“ಇಲ್ಲಿಯವರೆಗೆ, ಪ್ರೀಮಿಯಂ ವಾಸ್ತುಶಿಲ್ಪ ವಿಭಾಗದಲ್ಲಿ ರಾಷ್ಟ್ರವ್ಯಾಪಿಯಾಗಿ ALUCOBOND ಉತ್ಪಾದನೆಯ 130 ದಶಲಕ್ಷ ಚದರ ಅಡಿಗಳಷ್ಟು ವಿಸ್ತಾರವಾದ ACP ಯನ್ನು ಬಳಸಲಾಗಿದೆ. 1995 (೧೯೯೫) ರಲ್ಲಿ, ALUCOBOND ವನ್ನು ಭಾರತದಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದಾಗ, ಹೊಸ ನಿರ್ಮಾಣ ಸಾಮಗ್ರಿಯಾಗಿ ಇದು ಭಾರತೀಯ ಮಾರುಕಟ್ಟೆಗಳಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿತು. ಮುಂಬೈನಂತಹ ನಗರದಲ್ಲಿ ಅನೇಕ ಕಟ್ಟಡಗಳಿವೆ; ಉದಾಹರಣೆಗೆ, CITI ಬ್ಯಾಂಕ್, IL & FS, NSE, ಭಾರತ್ ಡೈಮಂಡ್ ಬೌರ್ಸೈನ್, ಬಾಂದ್ರಾ – ಕುರ್ಲಾ ಕಾಂಪ್ಲೆಕ್ಸ್ ಇಂತಹ ಕಡೆಗಳಲ್ಲೆಲ್ಲ 1990 (೧೯೯0) ರ ದಶಕದ ಅಂತ್ಯದಲ್ಲಿ ಮತ್ತು 2000 (೨000) ದಶಕದ ಆರಂಭದಲ್ಲಿ ALUCOBOND ಅನ್ನು ಬಳಸಿದ್ದು, ಇವು ಈಗಲೇ ವಿಶ್ವದರ್ಜೆಯ ನಿರ್ಮಾಣಕ್ಕೆ ಸಾಕ್ಷಿಯಾಗಿವೆ. ಇದು ವಾಸ್ತುಶಿಲ್ಪದ ಕ್ರಾಂತಿಯನ್ನು ಸೃಷ್ಟಿಸಿತು ಮತ್ತು ಹೊಸ ಮಾದರಿಯನ್ನು ಹೊಂದಿಸಿತು” ಎಂದು ಶರ್ಮಾ ವಿವರಿಸಿದರು.