ಇತ್ತೀಚಿನ ಸುದ್ದಿ
ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಕೇಸ್ : ಅಕ್ರಮ ಖಾತೆ ಮಾಡಿದ ಆರೋಪ; ಪೊಲೀಸರಿಗೆ ಉಪ ವಿಭಾಗಾಧಿಕಾರಿ ದೂರು
13/08/2023, 10:04
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸದ್ಯ ಕಡೂರಿನಿಂದ ವರ್ಗಾವಣೆಗೊಂಡಿರುವ ತಹಸೀಲ್ದಾರ್ ಉಮೇಶ್
ಅವರು ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಅವರು ತಹಶೀಲ್ದಾರರ್ ಉಮೇಶ್ ವಿರುದ್ದ ಕಡೂರು ಪೊಲೀಸರಿಗೆ
ದೂರು ನೀಡಿದ್ದಾರೆ.
ಸರ್ಕಾರಿ ಬೀಳು ಜಮೀನನ್ನು ಅಕ್ರಮವಾಗಿ ಜನರಿಗೆ ಖಾತೆ ಮಾಡಿಕೊಟ್ಟಿದ್ದ ಆರೋಪ
ತಹಶೀಲ್ದಾರ್ ಉಮೇಶ್ ಮೇಲಿದೆ. ಕಡೂರು ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಖಾತೆ ಮಾಡಿ ಕೊಡಲಾಗಿದೆ. ಗ್ರಾಮದ ಹನುಮಯ್ಯ, ರತ್ನಮ್ಮ, ನಾರಾಯಣಪ್ಪ, ಗೌರಮ್ಮಗೆ ಖಾತೆ ಮಾಡಿಕೊಟ್ಟಿರುವ ಆರೋಪ ತಹಶೀಲ್ದಾರ್ ಅವರ ಮೇಲಿದೆ. ಸರ್ಕಾರಿ ಬೀಳು ಜಮೀನನ್ನು ನಾಲ್ವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಒಟ್ಟು
5.04 ಎಕರೆ ಸರ್ಕಾರಿ ಜಮೀನನ್ನ ಉಮೇಶ್ ಅವರು
ನಾಲ್ವರಿಗೆ ಖಾತೆ ಮಾಡಿಕೊಟ್ಟಿದ್ದಾರೆ.
ಕಾನೂನಿನ ನಿಯಮಗಳನ್ನು ಗಾಳಿ ತೂರಿ ತಹಶೀಲ್ದಾರ್ ಉಮೇಶ್ ಅವರು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪವಿದೆ. ತಹಶೀಲ್ದಾರ್ ಉಮೇಶ್ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರ್ ಉಮೇಶ್, ಶಿರಸ್ತೆದಾರ್ ನಂಜುಂಡಯ್ಯ, ಆರ್. ಐ. ಬಸವರಾಜಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.
ಕಡೂರು ಪೊಲೀಸ್ ಠಾಣೆಗೆ ಎಸಿ ಕಾಂತರಾಜ್ ದೂರು ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಉಮೇಶ್
ಕಡೂರಿನಿಂದ ವರ್ಗಾವಣೆಗೊಂಡಿದ್ದಾರೆ.