ಇತ್ತೀಚಿನ ಸುದ್ದಿ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ನ್ಯಾಯಕ್ಕಾಗಿ ಸುಳ್ಯದಲ್ಲಿ ಬೃಹತ್ ವಾಹನ ಜಾಥಾ, ಬಹಿರಂಗ ಸಭೆ
08/08/2023, 15:15
ಸುಳ್ಯ(reporterkarnataka.com): ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಎಂಬ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ಇದೀಗ ಎಲ್ಲೆಡೆ ಪ್ರತಿಭಟನೆಯ ಕೂಗು ಕೇಳಿ ಬರುತ್ತಿದ್ದು, ಇಂದು ಸುಳ್ಯದಲ್ಲಿ ಬೃಹತ್ ವಾಹನ ಜಾಥಾ ಹಾಗೂ ಬೃಹತ್ ಸಭೆ ನಡೆದಿದೆ.
ನಿಂತಿಕಲ್ಲಿನಿಂದ ವಾಹನ ಜಾಥಾ ಆರಂಭಗೊಂಡಿದೆ.
ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಜಾಥಾಕ್ಕೆ ಜಾಲನೆ ನೀಡಿದ್ದಾರೆ.
ನಿಂತಿಕಲ್ಲಿನಿಂದ ಹೊರಟ ವಾಹನ ಜಾಥಾ ಪೈಚಾರಿಗೆ ತಲುಪಿ ಅಲ್ಲಿಂದ ನಡಿಗೆಯ ಮೂಲಕ ಸುಳ್ಯಕ್ಕೆ ಆಗಮಿಸಿದೆ. ಸುಳ್ಯದಲ್ಲಿ ಬೃಹತ್ ಸಭೆ ನಡೆದಿದೆ.