ಇತ್ತೀಚಿನ ಸುದ್ದಿ
ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನೀರುಪಾಲು: ಓರ್ವ ಬಚಾವ್
06/08/2023, 11:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ದಾರುಣ ಘಟನೆ ಮೂಡಿಗೆರೆ ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.
ಮೀನು ಹಿಡಿಯಲು ನೀರಿಗಿಳಿದ ಮೂವರು ಬಾಲಕರಲ್ಲಿ ಓರ್ವ ಬಾಲಕ ಈಜಿ ದಡ ಸೇರಿದರೆ, ಇನ್ನಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತನ್ಮಯಿ ಹಾಗೂ ಕಿಶೋರ್ (12) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಕೆರೆಯಲ್ಲಿ ಸಿಲುಕಿದ್ದ ಓರ್ವ ಬಾಲಕ ಹರಸಾಹನ ಪಟ್ಟು ಬಚಾವ್ ಆಗಿದ್ದಾನೆ. ಇಬ್ಬರ ಮೃತದೇಹವನ್ನು ಸ್ಥಳಿಯರು ಕೆರೆಯಿಂದ ಹೊರಗೆ ತೆಗೆದಿದ್ದಾರೆ.
ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು.