ಇತ್ತೀಚಿನ ಸುದ್ದಿ
ಕೇದಾರನಾಥ ಯಾತ್ರೆ: ಚಿಕ್ಕಮಗಳೂರು ಜನ್ನಾಪುರದ ಯುವ ಯಾತ್ರಿ ಸಾವು; ಪೊಲೀಸರಿಂದ ಕುಟುಂಬಕ್ಕೆ ಮಾಹಿತಿ
01/08/2023, 10:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ಗಿರೀಶ್ (25) ಕೇದಾರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದ ಮೃತ ಯುವಕ ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಿವಾಸಿಯಾಗಿದ್ದಾನೆ.
ಕಳೆದ ವಾರ ಈತ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆಗೆ ತೆರಳಿದ್ದ.ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಮೃತಪಟ್ಟ
ಗಿರೀಶ್ ನ ಮೃತದೇಹವನ್ನು ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಕೇದಾರನಾಥ ಪೊಲೀಸರಿಂದ ಗಿರೀಶ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಗಿರೀಶ್ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ.