ಇತ್ತೀಚಿನ ಸುದ್ದಿ
ವಿ.ಟಿ. ರೋಡ್ ಶಾರದಾ ಮಹೋತ್ಸವ ಬೆಳ್ಳಿಹಬ್ಬ: ವಿಜ್ಞಾಪನಾ ಪತ್ರ ಬಿಡುಗಡೆ
29/07/2023, 20:58
ಮಂಗಳೂರು(reporterkarnataka.com):ಶ್ರೀ ಶಾರದಾ ಮಹೋತ್ಸವದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ವಿ.ಟಿ.ರೋಡ್ ಬಾಲಕ ವೃಂದ (ರಿ) ವತಿಯಿಂದ ಈ ವರ್ಷದ ಶ್ರೀ ಶಾರದಾ ಮಹೋತ್ಸವದ ವಿಜ್ಞಾಪನಾ ಪತ್ರವನ್ನು ವಿ.ಟಿ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಉತ್ಸಾಹಿ ಯುವಕರು ಸೇರಿ ಪ್ರತಿ ವರ್ಷ ಇಲ್ಲಿ ಶಾರದೋತ್ಸವವನ್ನು ಬಹಳ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ವಿ.ಟಿ.ರೋಡ್ ಬಾಲಕ ವೃಂದ 25 ನೇ ವರ್ಷದ ಶಾರದ ಮಹೋತ್ಸವವನ್ನು ಆಚರಿಸಲಿದ್ದು, ಸ್ವರ್ಣ ವೀಣೆ ಹಾಗೂ ಬೆಳ್ಳಿಯ ಪ್ರಭಾವಳಿಯನ್ನು ದೇವಿಗೆ ಸಮರ್ಪಿಸಲಿದೆ. ಅದಕ್ಕಾಗಿ ಆಸ್ತಿಕ ಭಕ್ತ ಬಾಂಧವರಿಂದ ಉದಾರ ಕೊಡುಗೆಯನ್ನು ಅಪೇಕ್ಷಿಸಿದೆ. ಇಂತಹ ಮಹತ್ಕಾರ್ಯದಲ್ಲಿ ನಾವೆಲ್ಲರೂ ಸಹಕರಿಸಿ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಂದಿರದ ಅರ್ಚಕರಾದ ವೇದಮೂರ್ತಿ ಕೃಷ್ಣಾನಂದ ಭಟ್, ವಿ.ಟಿ.ರೋಡ್ ಬಾಲಕ ವೃಂದದ ಅಧ್ಯಕ್ಷ ವರುಣ್ ಪೈ, ಕಾರ್ತಿಕ್ ಪೈ, ರಾಜೇಶ್ ಪಡಿಯಾರ್, ನಾರಾಯಣ ನಾಯಕ್, ರಜತ್ ಭಂಡಾರ್ಕರ್, ಉದ್ಯಮಿ ಕುಡ್ಪಿ ಜಗದೀಶ್ ಶೆಣೈ, ಶ್ರೀ ಕೃಷ್ಣ ಮಂದಿರದ ಟ್ರಸ್ಟಿಗಳು, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.