10:44 AM Tuesday10 - February 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಡೂಮ್ ಡೇ ಆರಾಧನೆ: ಕೆನ್ಯಾದಲ್ಲಿ ಮತ್ತೆ 12 ಮಂದಿ ಶವ ಪತ್ತೆ; ಮೃತರ ಸಂಖ್ಯೆ 400ಕ್ಕೇರಿಕೆ

19/07/2023, 14:26

ನೈರೋಬಿ(reporterkarnataka.com):
ಕೆನ್ಯಾದಲ್ಲಿ ಡೂಮ್‌ ಡೇ ಆರಾಧನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೇದಾರರು ಸೋಮವಾರ 12 ಮೃತದೇಹಗಳನ್ನು ಹೊರತೆಗೆದಿದ್ದು, ಇದರಿಂದ ಮೃತಪಟ್ಟವರ ಸಂಖ್ಯೆ 400 ದಾಟಿದೆ.
ಯೇಸು ಸ್ವಾಮಿಯನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ ಇದಾಗಿದೆ. ಕರಾವಳಿ ಕೆನ್ಯಾದ ಮಲಿಂದಿ ಪಟ್ಟಣ ಬಳಿಯ ಶಕಹೋಲ ಅರಣ್ಯದಲ್ಲಿ ನೆಲೆಸಿರುವ ಪಂಥದೊಂದಿಗೆ ನಂಟು ಹೊಂದಿದ್ದ ಧಾರ್ಮಿಕ ನಾಯಕ ಪೌಲ್ ಮ್ಯಾಂಕಝಿ, ತನ್ನ ಅನುಯಾಯಿಗಳಿಗೆ ಈ ಆರಾಧನೆ ನಡೆಸುವಂತೆ ಉಪದೇಶಿಸಿದ್ದರು.
ಕಠೋರ ವ್ರತಾಚರಣೆಯಿಂದ ಹಲವರು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌಲ್ ಮತ್ತು 36 ಶಂಕಿತರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇನ್ನಷ್ಟೇ ಇವರೆಲ್ಲರ ವಿರುದ್ಧ ದೋಷಾರೋಪ ಹೊರಿಸಬೇಕಿದೆ.
‘ಮೃತಪಟ್ಟವರ ಸಂಖ್ಯೆ 403ಕ್ಕೇರಿದ್ದು, 95 ಜನರನ್ನು ರಕ್ಷಿಸಲಾಗಿದೆ’ ಎಂದು ಕರಾವಳಿ ಪ್ರಾದೇಶಿಕ ಆಯುಕ್ತ ರೋಡಾ ಒನ್ಯಾಂಚ ಹೇಳಿದ್ದಾರೆ.
ಮಲಿಂದಿ ಪಟ್ಟಣದಲ್ಲಿ ಬೀಡುಬಿಟ್ಟಿರುವ ಕೆನ್ಯಾ ರೆಡ್‌ ಕ್ರಾಸ್‌ ಅಧಿಕಾರಿಗಳಿಗೆ 613 ಜನರು ನಾಪತ್ತೆಯಾಗಿರುವ ವರದಿ ದಾಖಲಾಗಿದೆ. ಪತ್ತೆದಾರರು ಸಾಮೂಹಿಕ ಸಮಾಧಿಗಳನ್ನು ಈಗಲೂ ಹುಡುಕುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು