ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಗರ ಮೋಜು- ಮಸ್ತಿ: ರಸ್ತೆಯಲ್ಲೇ ಯುವಕ-ಯುವತಿಯ ಡ್ಯಾನ್ಸ್; ಟ್ರಾಫಿಕ್ ಜಾಮ್
10/07/2023, 11:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು-ಮಸ್ತಿ ಜಾಸ್ತಿಯಾಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಘಾಟಿಯುದ್ಧಕ್ಕೂ ಸಣ್ಣ ಸಣ್ಣ ಜಲಪಾತ ತಲೆದೋರುವುದು ಮಳೆಗಾಲದ ಸಮಯದಲ್ಲಿ ಸಾಮಾನ್ಯವಾಗಿದೆ. ವಾಟರ್ ಫಾಲ್ಸ್ ನ ಸೊಬಗಿಗೆ, ಪ್ರಕೃತಿಯ ಧಾರಾಳತನಕ್ಕೆ ಮನಸೋತು ಇಲ್ಲಿ ಪ್ರವಾಸಿಗರು ತಮ್ಮ ವಾಹನಗಳಿಂದ ಇಳಿದು ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಇನ್ನು ತುಂತುರು ಮಳೆ ಬೀಳುತ್ತಿದ್ದರೆ ಪ್ರವಾಸಿಗರು ಮೋಜು- ಮಸ್ತಿ ಹೇಳತೀರದು. ರಸ್ತೆಯಲ್ಲೇ ಯುವಕ- ಯುವತಿಯರು ರೈನ್ ಡ್ಯಾನ್ಸ್ ಮಾಡುತ್ತಾರೆ. ಇದರಿಂದ ಪ್ರಯಾಣಿಕರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರನ್ನು ಹೇಳೋರಿಲ್ಲ-ಕೇಳೋರಿಲ್ಲ ಎಂಬ ಸ್ಥಿತಿ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಕಿರಿದಾದ ಹಾವು ಬಳುಕಿನ ಮೈಕಟ್ಟಿನಲ್ಲಿ ರಸ್ತೆ ಇದೆ.
ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಕಾಣಿಸುವುದಿಲ್ಲ. ಕುಣಿಯುವ ಭರದಲ್ಲಿ ವಾಹನಗಳಿಗೂ ಪ್ರವಾಸಿಗರು ಅಡ್ಡ ಬರುತ್ತಾರೆ.
ಅಪಘಾತ, ಟ್ರಾಫಿಕ್ ಜಾಮ್ ಗೂ ಆಹ್ವಾನ ನೀಡಿದಂತಾಗುತ್ತದೆ. ಜಲಪಾತಗಳ ಬಳಿ ಪೊಲೀಸರ ಬೀಟ್ ಹಾಕುವಂತೆ ಸ್ಥಳಿಯರ ಮನವಿ ಮಾಡಿದ್ದಾರೆ.
ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೆಲವು ಪ್ರವಾಸಿಗರು ಮುಂದಾಗುತ್ತಾರೆ ಎಂಬ ದೂರು ಕೂಡ ಕೇಳಿ ಬರುತ್ತಿದೆ.