ಇತ್ತೀಚಿನ ಸುದ್ದಿ
ಮತ್ತೆ ಖಾದರ್ ಖದರ್!: ಸ್ಪೀಕರ್ ಆದರೂ ಮರೆತಿಲ್ಲ ಸ್ವಕ್ಷೇತ್ರದ ಜನರ ದುಃಖ- ದುಮ್ಮಾನ; ಕಡಲ್ಕೊರೆತ, ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ
09/07/2023, 11:31

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಅಜಾತಶತ್ರು ಯು.ಟಿ. ಖಾದರ್ ಪ್ರಸ್ತುತ ವಿಧಾನ ಸಭೆ ಸ್ಪೀಕರ್. ಸದನದ ಗುರಿಕಾರನಾಗಿ ಚೊಚ್ಚಲ ಅಧಿವೇಶನ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಹೆಗಲ ಮೇಲೆ ಅಷ್ಟೊಂದು ದೊಡ್ಡ ಜವಾಬ್ದಾರಿ ಇದ್ದರೂ ತನ್ನ ಸ್ವಕ್ಷೇತ್ರದ ಕಾಳಜಿ ಬಗ್ಗೆ ಎಳಷ್ಟು ಲೋಪ ಬಾರದಂತೆ ಎಚ್ಚರ ವಹಿಸಿದ್ದಾರೆ.
ಖಾದರ್ ಅವರ ಖದರ್ ಅಂತಹದ್ದೇ. ಬೀದಿ ಬದಿ ಕಡ್ಲೆಕಾಯಿ ಮಾರುವವರಿಂದ ಆರಂಭಗೊಂಡು ಕೋಟ್ ಧಾರಿಗಳ ವರೆಗೆ ಎಲ್ಲರನ್ನು ಪ್ರೀತಿ- ಗೌರವದಿಂದ ನೋಡಿಕೊಳ್ಳುವುದು ಅವರ ವಿಶೇಷತೆ. ಇದರ ಫಲ ಎಂಬಂತೆ ಖಾದರ್ ಅವರು ಎರಡು ದಶಕಗಳಿಂದ ತನ್ನ ಸ್ವಕ್ಷೇತ್ರ ಮಂಗಳೂರು(ಉಳ್ಳಾಲ)ಜನತೆಯ ವಿಶ್ವಾಸ ಕಳೆದುಕೊಂಡಿಲ್ಲ. ಖಾದರ್ ಅವರು ಸ್ಪೀಕರ್ ಆದಾಗ ಅವರ ಕ್ಷೇತ್ರದ ಹೆಚ್ಚಿನ ಜನರಿಗೆ ತುಂಬಾ ಭಯವಿತ್ತು. ಖಾದರ್ ಅವರನ್ನು ಮಂತ್ರಿಯಾಗಿ ನೋಡಲು ಬಯಸುತ್ತಿದ್ದ ಕ್ಷೇತ್ರದ ಜನತೆಗೆ ಸ್ಪೀಕರ್ ಆದರೆ ಎಲ್ಲಿ ಅವರು ತಮ್ಮ ಕೈತಪ್ಪಿ ಹೋಗುತ್ತಾರಾ?, ನಮ್ಮನ್ನು ಮರೆತು ಬಿಡುತ್ತಾರಾ? ಎಂಬ ಅನಾಥ ಪ್ರಜ್ಞೆಯ ಜತೆಗೆ ಪ್ರಶ್ನಾರ್ಥಕ ಭಯ ಜನರಲ್ಲಿ ಆವರಿಸಿತ್ತು. ಆದರೆ ಖಾದರ್ ಅವರು ಸ್ಪೀಕರ್ ಆದರೂ ಕ್ಷೇತ್ರದ ಜನತೆಯನ್ನು ಮರೆತಿಲ್ಲ. ಹಾಗೆ
ಕ್ಷೇತ್ರ ಕಾರ್ಯದಲ್ಲಿ ಲೋಪ ಎಸಗಿದ ಲಕ್ಷಣ ಕಾಣುತ್ತಿಲ್ಲ. ವಿಧಾನ ಸಭೆ ಅಧಿವೇಶನಕ್ಕೆ ಶನಿವಾರ ಮತ್ತು ಭಾನುವಾರ ಇರುವ ಸಣ್ಣ ಬ್ರೇಕನ್ನು ಬಳಸಿಕೊಂಡು ಅವರು ತನ್ನ ಸ್ಚಕ್ಷೇತ್ರ ಉಳ್ಳಾಲಕ್ಕೆ ಆಗಮಿಸಿದ್ದಾರೆ.
ಶನಿವಾರ ತುಂಬಿ ತುಳುಕುತ್ತಿದ್ದ ಮಂಗಳೂರಿನ ಸುರ್ಕ್ಯುಟ್ ಹೌಸ್ ನಲ್ಲಿ ಜನರ ಅಹವಾಲು ಆಲಿಸಿದ್ದಾರೆ. ನಂತರ ಉಳ್ಳಾಲ ಕಡಲ ಕಿನಾರೆಗೆ ಭೇಟಿ ನೀಡಿ ಕಡಲ್ಕೊರೆತ ಬಗ್ಗೆ ಪರಿಶೀಲಿಸಿದ್ದಾರೆ. ಗುಡ್ಡ ಕುಸಿತ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಮತ್ತೊಮ್ಮೆ ಆತ್ಮವಿಶ್ವಾಸ ಮೂಡಿಸಿದ್ದಾರೆ. ಕ್ಷೇತ್ರ ತುಂಬಾ ಸಾಮಾನ್ಯ ಶಾಸಕನ ತರಹ ಓಡಾಡಿದ್ದಾರೆ. ಕ್ಷೇತ್ರ ಮಾತ್ರವಲ್ಲ ನಾಡಿನುದ್ದಗಲದ ಪ್ರಜ್ಞಾವಂತರಿಗೂ ಇದು ಖುಷಿ ಕೊಟ್ಟಿದೆ.