10:51 PM Sunday27 - July 2025
ಬ್ರೇಕಿಂಗ್ ನ್ಯೂಸ್
Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ…

ಇತ್ತೀಚಿನ ಸುದ್ದಿ

ಸಜಂಗದ್ದೆ ರಾಮ ಭಟ್ ಅವರಿಗೆ ಪ್ರೊ.ಎಂ.ರಾಮಚಂದ್ರ ಸಂಸ್ಮರಣಾ ಪ್ರಶಸ್ತಿ

08/07/2023, 11:25

ಕಾರ್ಕಳ(reporterkarnataka.com): ಕಾರ್ಕಳ ಸಾಹಿತ್ಯ ಸಂಘದ ಸಂಸ್ಥಾಪಕರಾದ ‘ಪ್ರೊ. ಎಂ.ರಾಮಚಂದ್ರ ಸಂಸ್ಮರಣೆಯ ಸಾಹಿತ್ಯ ಪ್ರಶಸ್ತಿ’ಗೆ ಈ ಸಾಲಿನಲ್ಲಿ ಶ್ರೇಷ್ಠ ಸಾಹಿತ್ಯ ಪರಿಚಾರಕರು ಹಾಗು ಸಾಹಿತಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಪಡ್ರೆ ಗ್ರಾಮದ ರಾಮ್ ಭಟ್ ಸಜಂಗದ್ದೆಯವರನ್ನು ತಜ್ಞರ ಆಯ್ಕೆ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಪ್ರಸ್ತುತ ಬಾರಕೂರಿನಲ್ಲಿ ನೆಲೆಸಿರುವ ರಾಮ್ ಭಟ್ ಅವರು ಬಾರಕೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಅತಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎಳೆಯ ಮಕ್ಕಳಿಗೆ‌ ತಲುಪಿಸಬೇಕು ಎನ್ನುವ ಆಶಯದೊಂದಿಗೆ ಸಾಹಿತ್ಯ ಕಮ್ಮಟ ಹಾಗೂ ಕಾರ್ಯಾಗಾರಗಳನ್ನು ನಡೆಸಿದ್ದರು. ಸಾಹಿತ್ಯಿಕವಾಗಿ ವಿದ್ಯಾರ್ಥಿಗಳನ್ನು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ತಮ್ಮ ವೃತ್ತಿ ಜೀವನದಲ್ಲಿ ೧೯ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ ಹಿರಿಮೆ ಇವರದ್ದು. ಇವರಿಂದ ಪ್ರೇರಣೆ ಪಡೆದ ಅನೇಕ ಎಳೆಯ ಪ್ರತಿಭೆಗಳು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಉತ್ತಮ ಲೇಖಕರಾಗಿರುವ ಇವರು ‘Nayars of Kerala’, ‘ನಾಡಿಗೆ ನಮಸ್ಕಾರಕ್ಕೆ ನೂರು ನಮಸ್ಕಾರ’, ‘ಅಜಪುರದ ಅಗ್ರಗಣ್ಯರು’, ‘ಹಾಲು ಜೇನು’, ‘ಭಾರತದ ಆರ್ಥಿಕ ಚರಿತ್ರೆ’, ‘ಹೂಡಿಕೆ ನಿಮ್ಮಲ್ಲೇ ಮಾಡಿಕೊಳ್ಳಿ’ ಮುಂತಾದ ಆರು ಕೃತಿಗಳನ್ನು ರಚಿಸಿದ್ದಾರೆ. ಉತ್ತಮ ಸಂಘಟಕರು, ಲೇಖಕರು, ಭಾಷಾಂತರಕಾರರಾದ ಇವರನ್ನು ಆಳ್ವಾಸ್ ನುಡಿಸಿರಿಯ ಅಂಗವಾಗಿ ನೆಡೆದ ‘ವಿದ್ಯಾರ್ಥಿ ಸಿರಿ’ ಸಮ್ಮೇಳನದಲ್ಲಿ ಮತ್ತು ಮಕ್ಕಳ ಸಾಹಿತ್ಯ ಸಂಗಮದಿಂದ ಕಟೀಲಿನಲ್ಲಿ ನಡೆದ ‘ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
ಶಾರದಾ ರಾಮಚಂದ್ರ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ‌ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ ೨೦-೦೭-೨೩ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ.ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾವೇರಿಯ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪ ಗೌಡರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು