ಇತ್ತೀಚಿನ ಸುದ್ದಿ
ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ ಮಹಿಳೆ ಸಾವು
07/07/2023, 11:41

ಬಂಟ್ವಾಳ(reporterarnataka.com): ಸಜಿಪ ಮುನ್ನೂರು ಗ್ರಾಮದ ನಂದಾವರ ನವಗ್ರಾಮ(ಗುಂಪುಮನೆ) ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು, ಮಹಿಳೆಯೊಬ್ಬರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಸಾವನ್ನಪ್ಪಿದ್ದಾರೆ.
ಕಳೆದ 5 ದಿನಗಳಿಂದ ಅವ್ಯಾಹತ ಮಳೆ ಸುರಿಯುತ್ತಿದ್ದು, ಗುಡ್ಡ ಕುಸಿದಿದೆ.ಸ್ಥಳೀಯರು ರಕ್ಷಣಾಕಾರ್ಯದಲ್ಲಿ ನಿರತರಾಗಿದ್ದಾರೆ