ಇತ್ತೀಚಿನ ಸುದ್ದಿ
ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡಕ್ಕೆ ಶೇ.50 ರಿಯಾಯಿತಿ: ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ಇಲ್ಲಿದೆ
07/07/2023, 11:03
ಮಂಗಳೂರು(reporterkarnataka.com): ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತರು ಸಭೆಯಲ್ಲಿ
ನಿರ್ಣಯಿಸಿದಂತೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತಕ್ಕೆ ಶೇ.50 ರಷ್ಟು ರಿಯಾಯಿತಿ ನೀಡಿ ಸರಕಾರ ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‍ನಲ್ಲಿ 2023ರ ಫೆ.11 ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಮಂಗಳೂರು ನಗರ ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಲು ಮಂಗಳೂರಿನ ಈ ಕೆಳಗಿನ ಕಚೇರಿ/ಕೇಂದ್ರಗಳಲ್ಲಿ ವಿಚಾರಿಸಲು ಮತ್ತು ದಂಡ ಪಾವತಿಸಿ ರಶೀದಿ ಪಡೆಯಲು ಅವಕಾಶವಿರುತ್ತದೆ.
1) ಮಂಗಳೂರು ನಗರದ ಸಂಚಾರ ಪೊಲೀಸ್ ಠಾಣೆಗಳಲ್ಲಿ
• ಎಸಿಪಿ ಕಚೇರಿ , ಸಂಚಾರ ಉಪವಿಭಾಗ, ಪಾಂಡೇಶ್ವರ, ಮಂಗಳೂರು(0824-2220823).
* ಸಂಚಾರ ಪೂರ್ವ ಪೊಲೀಸ್ ಠಾಣೆ, ಕದ್ರಿ ಹಿಲ್ಸ್ , ಮಂಗಳೂರು (ಕೆಪಿಟಿ ವೃತ್ತದ ಬಳಿ) (0824-2220523) *ಸಂಚಾರ ಪಶ್ಚಿಮ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು (0824-2220524).
* ಸಂಚಾರ ಉತ್ತರ ಪೊಲೀಸ್ ಠಾಣೆ, ಬೈಕಂಪಾಡಿ, ಮಂಗಳೂರು (24-2220833..
* ಸಂಚಾರ ದಕ್ಷಿಣ ಪೊಲೀಸ್ ಠಾಣೆ, ಜಪ್ಪಿನಮೊಗರು, ಮಂಗಳೂರು.(0824-2220850).
*ಕರ್ನಾಟಕ ರಾಜ್ಯದ ಅಂಚೆ
ಕಚೇರಿಗಳಲ್ಲಿ (Payment can be made at the post office counters in
cash or though ill code Scanning)0824-2218400/2212305, 9448291072
* ಮಂಗಳೂರು ಒನ್ ಕೇಂದ್ರಗಳಲ್ಲಿ, ಮಂಗಳೂರು,
* ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ (www.karnatakaone.gov.in),