ಇತ್ತೀಚಿನ ಸುದ್ದಿ
ಅವ್ಯಾಹತ ಮಳೆಯಿಂದ ಮಂಗಳೂರಿನಲ್ಲಿ ಕೈಕೊಟ್ಟಿದ್ದ ಟ್ರಾಫಿಕ್ ಸಿಗ್ನಲ್ ಮತ್ತೆ ಕಾರ್ಯಾರಂಭ
05/07/2023, 20:50
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಭಾರೀ ಮಳೆಯ ಪರಿಣಾಮ ಬುಧವಾರ ಬೆಳಗ್ಗಿನಿಂದ ಕೈಕೊಟ್ಟಿದ್ದ ಮಂಗಳೂರಿನ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮತ್ತೆ ಕಾರ್ಯಾರಂಭ ಶುರುಮಾಡಿದೆ.
ಬುಧವಾರ ಮಧ್ಯಾಹ್ನದ ಬಳಿಕ ಟ್ರಾಫಿಕ್ ಸಿಗ್ನಲ್ ಮತ್ತೆ ಆರಂಭಗೊಂಡಿದೆ. ಕಳೆದ ಮೂರು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು,ಹಂಪನಕಟ್ಟೆಯ ಟ್ರಾಫಿಕ್ ಸಿಗ್ನಲ್ ಕೆಟ್ಟು ಹೋಗಿತ್ತು.
ಟ್ರಾಫಿಕ್ ಸಿಗ್ನಲ್ ಸಂಬಂಧಿಸಿದಂತೆ ನಮಗೆ ಯಾವುದೇ ದೂರು ಬಂದಿಲ್ಲ. ಪವರ್ ಆ ಭಾಗದಲ್ಲಿ ಇತ್ತು ಎಂದು ಮೆಸ್ಕಾಂ ನೆಹರೂ ಮೈದಾನ ಶಾಖೆಯ ಕಿರಿಯ ಎಂಜಿನಿಯರ್ ಆರ್.ಚರಣ್ ಕುಮಾರ್ ರಿಪೋಟರ್ ಕರ್ನಾಟಕಕ್ಕೆ ಹೇಳಿದ್ದಾರೆ.
ಈ ನಡುವೆ ಡಿಸಿಪಿ ದಿನೇಶ್ ಕುಮಾರ್ ಅವರು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿ,ತಾಂತ್ರಿಕ ಸಮಸ್ಯೆಯಿಂದ ಇವತ್ತು ಸಿಗ್ನಲ್ ಸಮಸ್ಯೆ ಉಂಟಾಗಿತ್ತು. ಆಮೇಲೆ ಸರಿಯಾಗಿದೆ ಎಂದು ಹೇಳಿದ್ದಾರೆ.