9:18 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಬಿಜೆಪಿ ಕಾರ್ಯದರ್ಶಿ ಮುಗ್ದರೋ? ಮೂರ್ಖರೋ? ಎಂಬ ಸಂಶಯ‌ ಮೂಡುತ್ತದೆ: ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್ ವ್ಯಂಗ್ಯ

01/07/2023, 23:56

ಕಾರ್ಕಳ(reporterkarnataka.com): ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ತಮ್ಮ ಪಕ್ಷದ ಕಚೇರಿಯಲ್ಲಿ ‌ಸರಕಾರಿ ಅಧಿಕಾರಿಗಳ ಸಭೆ ನಡೆಸುವ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿತ್ತು. ಆದರೆ ಬಿಜೆಪಿ ಕಾರ್ಯದರ್ಶಿ ಪಕ್ಷದ ಕಚೇರಿಯೇ ಸರಕಾರಿ ಕಚೇರಿ ಎಂಬ ರೀತಿಯಲ್ಲಿ‌ ಹೇಳಿಕೆಯನ್ನು ನೀಡಿದ್ದಾರೆ ಇದರಿಂದ ಅವರು ಮುಗ್ದರೋ ಅಥವಾ ಮೂರ್ಖರೋ ಎಂಬ‌ ಸಂಶಯ ವ್ಯಕ್ತವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಪುರಸಭಾ ಸದಸ್ಯ ಶುಭದ ರಾವ್ ಕಟುವಾಗಿ ಪ್ರಶ್ನಿಸಿದ್ದಾರೆ.
ಶಾಸಕ ಸುನಿಲ್‌ ಕುಮಾರ್ ರವರು ತಮ್ಮ ಕಚೇರಿಗೆ ಮಾರಾಟಕಿಲ್ಲದ ಸರಕಾರಿ ಸಿಮೆಂಟ್ ಬಳಸಿದ್ದಾರೆ ಎಂದು ವೀಡಿಯೋ ದಾಖಲೆ ಸಹಿತವಾದ ಅರೋಪ ಬಂದಾಗ ಆ ಕಟ್ಟಡವನ್ನು ನನ್ನ ಕುಟುಂಬದವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಾಗಾಗಿ ಶಾಸಕರ ಕುಟುಂಬದ ಹೆಸರಿನಲ್ಲಿರುವ ಕಟ್ಟಡ ಸರಕಾರಿ‌ ಕಟ್ಟಡ ಆಗಲು ಹೇಗೆ ಸಾದ್ಯ‌ ಎಂದು ಪ್ರಶ್ನಿಸಿದ್ದಾರೆ?
ಕಾರ್ಕಳ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಶಾಸಕರಿಗೆ ನೀಡಿದ ಕಚೇರಿಯೇ ಅಧಿಕೃತ ಕಚೇರಿಯಾಗುತ್ತದೆ. ಅದಲ್ಲದೆ ಪಕ್ಷದ ಚಟುವಟಿಕೆ ನಡೆಯುವ ಇತರ ಯಾವುದೇ ಕಚೇರಿ‌ ಅಧಿಕೃತವಾಗುವುದಿಲ್ಲ. ಇದನ್ನು ಅರಿತೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರೆ ಮುಂದಿನ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಕಾಂಗ್ರೆಸ್ ಸರಕಾರದ ಕೊಡುಗೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಮತ್ತು ರಮೇಶ್ ಕುಮಾರ್ ರವರ ಮುತುವರ್ಜಿಯಿಂದ ಅನುದಾನ ಬಿಡುಗಡೆಯಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ, ವೀರಪ್ಪ ಮೊಯ್ಲಿ ಅವರು ಕೇಂದ್ರದ ಮಂತ್ರಿಯಾಗಿ ಖಾಸಗಿ ಕಂಪನಿಯ ಮೂಲಕ ಇನ್ನೊಂದು ಕಟ್ಟಡಕ್ಕೆ ಅನುದಾನ ಕೊಟ್ಟಿರುವುದು ದಾಖಲೆಯಿಂದ ಗೊತ್ತಾಗುತ್ತದೆ ನಿಮ್ಮ ಸುಳ್ಳು ಹೆಚ್ಚು ದಿನ ಬಾಳದು. ಆದರೆ ಆಸ್ಪತ್ರೆಯ ಇಂದಿನ ಪರಿಸ್ಥಿತಿಗೆ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದರು.
ನನ್ನ ಅರೋಪಗಳು ನ್ಯಾಯ ಪರ ಹೊರತು ವೈಯಕ್ತಿಕ ಅಲ್ಲ ಮೊದಲಿನಿಂದಲೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ಆದರೆ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುವಾಗ ವೈಯಕ್ತಿಕ ಟೀಕೆ ಮಾಡಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಸಮರ್ಪಕ ಉತ್ತರ ನೀಡಲು ಸಾಧ್ಯವಾಗದವರು ಮಾತ್ರ ಹೀಗೆ ಮಾಡಲು ಸಾಧ್ಯ. ಆದರಿಂದಾಗಿ ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು