ಇತ್ತೀಚಿನ ಸುದ್ದಿ
ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ: ಮಂಗಳೂರಿನಲ್ಲಿ ಸೆಮಿನಾರ್ ಕಾರ್ಯಕ್ರಮ
29/06/2023, 17:08
ಮಂಗಳೂರು(reporterkarnataka.com): ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ ಪ್ರಯುಕ್ತ ದಕ್ಷಿಣ ಕನ್ನಡ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ ಆಯೋಜಿಸಿರುವ ಗೋನಾರಿ ಅಕಾಡೆಮಿ ಬೆಂಗಳೂರು ಇವರ ಸೆಮಿನಾರ್ ಕಾರ್ಯಕ್ರಮ ನಗರದ ಹೋಟೆಲ್ ಹೊಟೇಲ್ ಗೋಲ್ಡ್ ಪಿಂಚ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೆಂಟ್ರಲ್ ಮಾರ್ಕೆಟ್ ನ ದುಬೈ ಬಜ್ಜಾರ್ ನಲ್ಲಿರುವ ಜೆ. ಜೆ. ಬ್ಯೂಟಿ ಕಿಂಗ್ ನ ಮಾಲಕರಾದ ಜಗದೀಶ್ ಅವರ ಪುತ್ರ ಆಕಾಶ್ ಆಗಮಿಸಿರದ್ದರು. ಗೋನಾರಿ ಅಕಾಡೆಮಿಯ ಸೌತ್ ಇಂಡಿಯ ರಿಜಿನಲ್ ಮೆನೇಜರ್ ರೋಶನಿ ಟಗೋರ್, ಕರ್ನಾಟಕ ಸೇಲ್ಸ್ ಮೆನೇಜರ್ ಲೂಬ್ನಾ, ಟ್ರೈನಾರ್ ದೀಪಾ ಮತ್ತು ದಿವ್ಯಾ ಇದ್ದರು. ಎಂಎಲ್ ಬಿಎ ಅಧ್ಯಕ್ಷರು ಬಬಿತಾ ಯು. ಶೆಟ್ಟಿ ಉದ್ಘಾಟನಾ ಭಾಷಣ ಮಾಡಿದರು ಕಾರ್ಯಕ್ರಮ ನಿರೋಪನೆ ಮತ್ತು ಸ್ವಾಗತ ಉಪಾಧ್ಯಕ್ಷರಾದ ಸುಲತಾ ಸುರತ್ಕಲ್ ಮಾಡಿದರು. ಧನ್ಯವಾದ
ಕೋಶಾಧಿಕಾರಿ ಝೀನಾ ವಂದಿಸಿದರು. ಜತೆ ಕಾರ್ಯದರ್ಶಿ ಸುಹಾನಾ ಉಪಸ್ಥಿತರಿದ್ದರು. ಎಲ್ಲ ಎಂಎಲ್ ಬಿಎ
ಸದಸ್ಯರು ನ್ಯಾಷನಲ್ ಬ್ಯೂಟಿಷಿಯನ್ ಡೇ ಸೆಲೆಬ್ರೇಶನ್ ಬಹಳ ಖುಷಿಯಾಗಿ ಆಚರಿಸಿದರು.