9:18 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಚೂರಿ ಇರಿತಕ್ಕೊಳಗಾದ ಭವಿತ್ ಭೇಟಿ ಮಾಡಿದ ಶಾಸಕ ಡಾ.ಭರತ್ ಶೆಟ್ಟಿ: ಆರೋಗ್ಯ ವಿಚಾರಣೆ

28/06/2023, 22:11

ಮಂಗಳೂರು(reporterkarnataka.com): ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಚೂರಿ ಇರಿತಕ್ಕೊಳಗಾದ ಭವಿತ್ ಅವರನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಶಾಸಕರಿಗೆ ಮಾಹಿತಿ ನೀಡಿದ ಭವಿತ್ ಯುವತಿಯೊಬ್ಬಳು ತಣ್ಣೀರುಬಾವಿ ಬಳಿ ಮನೆಗೆ ಹೋಗುತ್ತಿದ್ದ ಸಂದರ್ಭ ಆರೋಪಿ ಸಾದಿಕ್ ಹಿಂಬಾಲಿಸಿಕೊಂಡು ಬಂದಿದ್ದು,ಆಕೆ ಭಯಗೊಂಡು ಧನುಷ್ ಎಂಬಾತನ ಮನೆಗೆ ಹೋಗಿ ನನಗೆ ಫೋನ್ ಮಾಡಿ ತಿಳಿಸಿದ್ದಾರೆ.

ತಾನು ಸಾದಿಕ್ ನನ್ನು ಪ್ರಶ್ನಿಸಿದಾಗ ಸಾದಿಕ್ ಕೆಟ್ಟದಾಗಿ ಬೈದು ಕೊಲ್ಲುವ ಉದ್ದೇಶದಿಂದ ಚೂರಿ ಇರಿದಿದ್ದಾನೆ ಎಂದು ಮಾಹಿತಿ ನೀಡಿದರು.
ಚೂರಿ ಇರಿದ ಆರೋಪಿ ತಣ್ಣೀರುಬಾವಿ ನಿವಾಸಿ ಸಾದಿಕ್ ಎಂಬಾತನಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಣಂಬೂರು ವಿಭಾಗದ ಎಸಿಪಿ ಅವರಿಗೆ ಸೂಚಿಸಿದ್ದೇನೆ ಎಂದು ಡಾ.ಭರತ್ ಶೆಟ್ಟಿ ಹೇಳಿದರು. ಇಂತಹ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಇದನ್ನೇ ಕೋಮು ಗಲಭೆಗೆ ಬಳಸಿ ಹಿಂದೂ ಸಂಘಟನೆಯ ಯುವಕರ ಮೇಲೆ ಗೂಬೆ ಕೂರಿಸುವ ಸಂಚು ಈ ಕಾಂಗ್ರೆಸ್ ಸರಕಾರದಲ್ಲಿ ನಡೆಯುವ ಶಂಕೆಯೂ ನನಗಿದೆ. ಹಿಂದೂ ಯುವತಿಯರ ರಕ್ಷಣೆಗೆ ಹಿಂದೂ ಸಮಾಜ ಶಕ್ತವಾಗಿದೆ. ದೂರದ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಆಗುವ ಇಂತಹ ಘಟನೆ ಇಲ್ಲಿ ನಡೆಯಲು ಆರಂಭವಾಗಿರುವುದು ಆತಂಕಕಾರಿ. ಇಂತಹ ಸೂಕ್ಷ ವಿಚಾರವನ್ನು ನೈತಿಕ ಪೊಲೀಸ್ ಗಿರಿ ಎಂದು ಬಣ್ಣ ಹಚ್ಚಲು ಅವಕಾಶ ಕೊಡದೆ ಪೊಲೀಸರು ತಕ್ಷಣ ಬಗೆಹರಿಸಲು ಕ್ರಮ ಜರಗಿಸಬೇಕು. ಹೊಸ ಹೋರಾಟ ,ಪ್ರತಿಭಟನೆಗೆ ಅವಕಾಶ ನೀಡಬೇಡಿ ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ತೀವ್ರ ನಿಗಾವಹಿಸಬೇಕು ಎಂದು ಎಚ್ಚರಿಸಿದರು.
ಮನಪಾ ಸದಸ್ಯರಾದ ಸುನಿತಾ ಯುವಮೋರ್ಚಾ ಪ್ರಮುಖರಾದ ಭರತ್ ರಾಜ್, ಸಂಜಿತ್ ಶೆಟ್ಟಿ, ರಾಹುಲ್, ಹರಿಪ್ರಸಾದ್ ಶೆಟ್ಟಿ, ದಿವೇಶ್, ತಿಲಕ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು