9:01 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯ ಸ್ಥಿತಿ:ತಲೆ ಮೇಲೆ ಕೈ ಹೊತ್ತು ಕಣ್ಣೀರಿಟ್ಟ ಜನಾರ್ದನ ಪೂಜಾರಿ !

21/07/2021, 18:14

ಮಂಗಳೂರು( reporterkarnataka news): 

ಕೇಂದ್ರ ಮಾಜಿ ಸಚಿವ, ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್  ಅವರ ಆರೋಗ್ಯ ಸ್ಥಿತಿಯನ್ನು ನೆನೆದು ಇನ್ನೊಬ್ಬ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ತಲೆ ಮೇಲೆ ಕೈಹೊತ್ತು ಕಣ್ಣೀರಿಟ್ಟ ಘಟನೆಗೆ ಭಾನುವಾರ ಮಂಗಳೂರು ಸಾಕ್ಷಿಯಾಯಿತು.

ನಗರದ ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಅವರ ಆರೋಗ್ಯ ಸ್ಥಿತಿಯನ್ನು ಕಂಡ ಬಳಿಕ ಪೂಜಾರಿ ಅವರು ಕಣ್ಣೀರ ಕೋಡಿ ಹರಿಸಿದರು. ಮಾಧ್ಯಮದ ಜತೆ ಮಾತನಾಡಲು ಯತ್ನಿಸಿದ ಪೂಜಾರಿ ಅವರು ಭಾವುಕರಾಗಿ ಮಾತು ಹೊರ ಹೊಮ್ಮಲೇ ಇಲ್ಲ. ಎರಡು ಪದ ಆಡುವಷ್ಟರಲ್ಲಿ ಗದ್ಗದಿತರಾಗಿ ತಲೆ ಮೇಲೆ ಕೈಇಟ್ಟು ರೋಧಿಸಲಾರಂಭಿಸಿದರು.

ರಾಜಕೀಯದಲ್ಲಿ ಸಮಕಾಲೀನರಾದ ಪೂಜಾರಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರು ಒಳ್ಳೆಯ ಮಿತ್ರರೂ ಕೂಡ ಆಗಿದ್ದರು. ಪೂಜಾರಿ ಅವರು ಸಂಸತ್ ನಲ್ಲಿ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಆಸ್ಕರ್ ಅವರು ನೆರೆಯ ಉಡುಪಿ ಕ್ಷೇತ್ರದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಪ್ರಬಲ ನಾಯಕರಾಗಿ ಅವರು ಹೊರ ಹೊಮ್ಮಿದ್ದರು.

ಯೋಗಾಭ್ಯಾಸ ಮಾಡುವಾಗ ಜಾರಿ ಬಿದ್ದು ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಆಸ್ಕರ್ ಫೆರ್ನಾಂಡಿಸ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ನಗರದ ಅತ್ತಾವರದ ಫ್ಲ್ಯಾಟ್ ನಲ್ಲಿ ಎಂದಿನಂತೆ ಯೋಗಾಭ್ಯಾಸ ನಿರತರಾಗಿದ್ದ ವೇಳೆ ಮಾಜಿ ಸಚಿವರು ಬಿದ್ದು ಗಾಯಗೊಂಡಿದ್ದರು. ಹೊರ ನೋಟಕ್ಕೆ ಯಾವುದೇ ಗಾಯಗಳಿಲ್ಲದ ಹಿನ್ನೆಲೆಯಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದರು. ಆದರೆ ಅದೇ ದಿನ ಸಂಜೆ ಡಯಾಲಿಸಿಸ್ ಗೆ ಆಸ್ಪತ್ರೆಗೆ ತೆರಳಿದಾಗ ತಲೆಯ ಒಳಭಾಗದಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ಅವರನ್ನು ನೋಡಿಕೊಳ್ಳುವ ವೈದ್ಯರು ಮಾಹಿತಿ ನೀಡಿದ್ದರು. ನಂತರ ಅವರು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು