ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟಿಯಲ್ಲಿ ಮನೆ ಸಾಮಗ್ರಿ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಪಲ್ಟಿ: ಚಾಲಕ ಪವಾಡಸದೃಶ್ಯ ಪಾರು
27/06/2023, 12:44
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ
ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿಯಾದ ಘಟನೆ ನಡೆದಿದೆ.
ಮನೆಗೆ ಸಾಮಾಗ್ರಿಗಳನ್ನ ಸಾಗಿಸುತ್ತಿದ್ದ ಪಿಕಪ್ ವಾಹನ ಚಾರ್ಮಾಡಿ ಘಾಟಿಯ ಆಲೇಖಾನ್ ಎಂಬಲ್ಲಿ ಪಲ್ಟಿ ಹೊಡೆದಿದೆ. ರಸ್ತೆ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ವಾಹನ ಪಲ್ಟಿ ಹೊಡೆದಿದೆ.
ಪಿಕಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎತ್ತರದ ರಸ್ತೆ ಹಾಗೂ ಮಳೆಯಿಂದ ತೇವಗೊಂಡಿದ್ದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪಿಕಪ್ ಚಕ್ರ ರಸ್ತೆಯಿಂದ ಕೆಳಗಿಳಿಯುತ್ತಿದ್ದಂತೆ ಜಾರಿ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.