ಇತ್ತೀಚಿನ ಸುದ್ದಿ
ತ್ರಾಸಿ: ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದ 4 ಮಂದಿ ಬಂಧನ; ನಗದು ವಶ
26/06/2023, 23:35
ಗಂಗೊಳ್ಳಿ(reporterkarnataka.com): ತ್ರಾಸಿ ಗ್ರಾಮದ ಮನೀಷ್ ಬಾರ್ ಸಮೀಪದಲ್ಲಿ
ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಂಕರ ದೇವಾಡಿಗ, ಗಣೇಶ ಕೃಷ್ಣ ದೇವಾಡಿಗ, ವಿಶ್ವನಾಥ ದೇವಾಡಿಗ ಹಾಗೂ ಬಾಬು ಪೂಜಾರಿ ಬಂಧಿತ ಆರೋಪಿಗಳು.
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ಅವರು ತನ್ನ ಸಿಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಮನೀಷ್ ಬಾರ್ ಬಳಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳಿಂದ 3800 ರೂ.
ನಗರದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.