ಇತ್ತೀಚಿನ ಸುದ್ದಿ
ಬಜೆ ಡ್ಯಾಮ್ ಗೆ ಭಾರೀ ಪ್ರಮಾಣದಲ್ಲಿ ಮಳೆ ನೀರು: ಕುದಿಸಿ ಕುಡಿಯಲು ನಾಗರಿಕರಿಗೆ ಸೂಚನೆ
26/06/2023, 23:20

ಉಡುಪಿ (reporterkarnataka.com): ಬಜೆ ಡ್ಯಾಂಗೆ ಸ್ವರ್ಣ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಬಂದಿದ್ದು, ಸದರಿ ನೀರಿನಲ್ಲಿ ಬಂದ ಕಸ , ಕಡ್ಡಿಗಳನ್ನು ಗೇಟ್ ತೆಗೆದು ನದಿಯಿಂದ ಹೊರ ಬಿಡಲಾಗಿದೆ. ಅದೇ ನೀರನ್ನು ತೆಗೆದುಕೊಂಡು ಶುದ್ಧೀಕರಣ ಮಾಡಿ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗಿರುತ್ತದೆ. ಆದ್ದರಿಂದ ನೀರನ್ನು ಕುದಿಸಿ ಕುಡಿಯಲು ಸೂಚಿಸಲಾಗಿದೆ.
ಇದು ಪ್ರಥಮ ಮಳೆಯಾಗಿರುವುದರಿಂದ ಆಲಂ ಪ್ರಮಾಣ ಈ ಹಿಂದೆ ನಿಗಧಿಪಡಿಸಿದಂತೆ ಇರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ಕೆಂಪು ನೀರು ಸರಬರಾಜು ಆಗಿರುತ್ತದೆ.
ಈಗಾಗಲೇ ಆಲಂ ಪ್ರಮಾಣವನ್ನು ಸರಿಪಡಿಸಲಾಗಿದ್ದು, ನಗರಸಭೆ ನೀರು, ಸರಬರಾಜು ಮಾಡುತ್ತಿರುವ ನೀರಿನಲ್ಲಿ ಕಸ-ಕಡ್ಡಿಗಳು ಬಂದಿರುವುದಿಲ್ಲ. ನೀರಿನ ಬಣ್ಣ ಮಾತ್ರ ಬದಲಾವಣೆ ಆಗಿರುತ್ತದೆ. ಇದು ಹೆಚ್ಚು ಮಳೆ ಬಿದ್ದಾಗ ಸ್ವಾಭಾವಿಕವಾಗಿ ಸಂಪೂರ್ಣ ಬಣ್ಣ ತೆಗೆಯಲು ಸಾಧ್ಯವಾಗಿರುವುದಿಲ್ಲ. ಆದಾಗ್ಯೂ ನಗರಸಭೆ ಸಾರ್ವಜನಿಕರ ಸುರಕ್ಷತೆಗೋಸ್ಕರ ಸಂಪೂರ್ಣ ಶುದ್ದೀಕರಣ ಮಾಡಿ ನೀರು ವಿತರಿಸಲು ಕ್ರಮ ಕೈಗೊಳ್ಳಲಿದ್ದು , ಮಳೆಗಾಲ ಆಗಿರುವ ಕಾರಣ ನೀರನ್ನು ಕಾಯಿಸಿ ಕುಡಿಯುವಂತೆ ತಿಳಿಸಲಾಗಿದೆ.