ಇತ್ತೀಚಿನ ಸುದ್ದಿ
ಕಾರ್ಕಳ : ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ಜೀಪಿನ ಟಯರ್ ಸ್ಫೋಟ: ಅದೃಷ್ಟವಶಾತ್ ಪಾರು
24/06/2023, 19:34

ಕಾರ್ಕಳ(reporterkarnataka.com): ಮಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಜೀಪೊಂದ ಟಯರ್ ಸ್ಪೋಟಗೊಂಡು ಅಪಘಾತಕ್ಕೀಡಾದ ಘಟನೆ ಕಾರ್ಕಳ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ಶನಿವಾರ ನಡೆದಿದೆ.
ಜೀಪ್ ನಲ್ಲಿ ತೆಲಂಗಾಣ ಶಾಸಕ ಪಂಜುಗುಳಿ ರೋಹಿತ್ ರೆಡ್ಡಿ ಶೃಂಗೇರಿ ಶಾರದಾಂಬೆ ಕ್ಷೇತ್ರಕ್ಕೆ ತೆರಳುತ್ತಿದ್ದರು.
ವೇಗವಾಗಿ ಸಾಗುತ್ತಿದ್ದ ಜೀಪಿನ ಟಯರ್ ಏಕಾಏಕಿ ಸ್ಟೋಟಗೊಂಡಿದ್ದು ಚಾಲಕನ ಸಮಯ ಪ್ರಜ್ಣೆ ಯಿಂದಾಗಿ ವಾಹನದಲ್ಲಿ ಇದ್ದ ಶಾಸಕರಿಗೆ ಯಾವುದೇ ತರದಲ್ಲಿ ಗಾಯಗಳಾಗಿಲ್ಲ.
ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುಗೆ ಸಿಲುಕಿದ ಜೀಪು ಜಖಂ ಗೊಂಡಿದೆ.