ಇತ್ತೀಚಿನ ಸುದ್ದಿ
ಒಂದೇ ಮಳೆಗೆ ಮಂಗಳೂರು ರಥಬೀದಿ ರಸ್ತೆ ತುಂಬಾ ನೀರು: ಕೊರೊನಾ ಮಧ್ಯೆ ಜನರ ಪರದಾಟ !!
15/05/2021, 10:11
ಮಂಗಳೂರು(reporterkarnataka news): ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ಮಂಗಳೂರಿನ ರಥಬೀದಿ, ಕುದ್ರೋಳಿ, ಅಳಕೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಂತಿದೆ.
ಸ್ಮಾರ್ಟ್ ಸಿಟಿ ವತಿಯಿಂದ ರಥಬೀದಿಯಲ್ಲಿ ಇತ್ತೀಚೆಗೆ ಕಾಮಗಾರಿ ನಡೆದಿತ್ತು. ಫುಟ್ ಪಾತ್ ಗಳಿಗೆ ಬಣ್ಣದ ಹಾಸುಗಲ್ಲು ಹಾಕಿ ಶೃಂಗಾರಗೊಳಿಸಲಾಗಿತ್ತು. ಆದರೆ ಎಲ್ಲ ಬಣ್ಣವನ್ನು ಮಸಿ ನುಂಗಿತು ಎನ್ನುವ ಹಾಗೆ ಮೊದಲ ಮಳೆಗೆ ನೀರು ಹೋಗಲು ಜಾಗವಿಲ್ಲದೆ, ಅಲ್ಲಲ್ಲಿ ರಸ್ತೆಯಲ್ಲೇ ಮಳೆ ನೀರು ನಿಂತಿದೆ. ಇದರಿಂದ ವಾಹನ ಸವಾರರಿಗೆ, ಅದರಲ್ಲೂ ಮುಖ್ಯವಾಗಿ ಪಾದಚಾರಿಗಳಿಗೆ ಬಹಳಷ್ಟು ತೊಂದರೆಯಾಗಿದೆ.