ಇತ್ತೀಚಿನ ಸುದ್ದಿ
ನಿಧಿಗಾಗಿ ಶೋಧ: ನಿರ್ಜನ ಪ್ರದೇಶದಲ್ಲಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುರುಳರು!
23/06/2023, 12:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ಘಟನೆ ಬೆಳಕಿಗೆ ಬಂದಿದೆ.
ಕೆಸರಿಕೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಿಧಿಗಾಗಿ ಶೋಧ ಮಾಡಲಾಗಿದೆ. 25 ಅಡಿಯಷ್ಟು ಆಳದ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಲಾಗಿದೆ.
ನಿಧಿಗಾಗಿ ಮಧ್ಯರಾತ್ರಿಯಲ್ಲಿ ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಗ್ರಾಮದಲ್ಲಿ ನಿಧಿಗಾಗಿ ಶೋಧ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡು ಗ್ರಾಮಸ್ಥರು
ಸ್ಥಳಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು
ಎಸ್ಕೇಪ್ ಆಗಿದ್ದಾರೆ. ನಿಧಿಗಾಗಿ ಶೋಧ ನಡೆಸಿದ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು ಪತ್ತೆಯಾಗಿದೆ.
ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ನಿಧಿ ಶೋಧದ ತಂಡ ಆಗಮಿಸಿತ್ತು ಎಂದು ಗ್ರಾಮಸ್ಥರು ತಿಳಿದ್ದಾರೆ.
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ನಡೆದಿದೆ.