ಇತ್ತೀಚಿನ ಸುದ್ದಿ
ಗುರುಪುರ: ಬೈಕಿಗೆ ಖಾಸಗಿ ಬಸ್ ಡಿಕ್ಕಿ; ಸವಾರ ಸಹಕಾರಿ ಬ್ಯಾಂಕ್ ಸಿಬ್ಬಂದಿ ದಾರುಣ ಸಾವು
22/06/2023, 17:15
ಮಂಗಳೂರು(reporterkarnataka.com): ನಗರದ ಹೊರ ವಲಯದ ಗುರುಪುರದಲ್ಲಿ ಇಂದು
ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟವರನ್ನು ಬಂಟ್ವಾಳ ತಾಲೂಕು ಕರಿಯಂಗಳ ನಿವಾಸಿ ಸಂತೋಷ್ ಪೂಜಾರಿ (38) ಎಂದು ಗುರುತಿಸಲಾಗಿದೆ. ವಾಮಜೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಗುರುಪುರ ಶಾಖೆಯ ಉದ್ಯೋಗಿಯಾಗಿದ್ದ ಸಂತೋಷ್ ಪುಜಾರಿ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಸಂತೋಷ್ ಚಲಾಯಿಸುತ್ತಿದ್ದ ಬೈಕ್ ಅವರು ಕೆಲಸ ಮಾಡುವ ವಾಮಂಜೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಗುರುಪುರ ಶಾಖೆಯ ಎದುರು ತಲುಪಿದಾಗ ಮೂಡಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿದೆ. ಸಂತೋಷ್ ಗಂಭೀರ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತ ಪಟ್ಟಿದ್ದಾರೆ.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.