9:17 PM Monday20 - May 2024
ಬ್ರೇಕಿಂಗ್ ನ್ಯೂಸ್
ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ…

ಇತ್ತೀಚಿನ ಸುದ್ದಿ

ಮಜಾಭಾರತದಿಂದ ಆರಂಭಗೊಂಡ ಆರಾಧನಾ ಯಾನ: ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಈಕೆ ಸಾಧಕಿ!

21/06/2023, 20:22

ಮಂಗಳೂರು(reporterkarnataka.com): ವಯಸ್ಸು ಬರೇ ಇಪ್ಪತ್ತು. ಓರೆಗಿತ್ತಿಯರ ಜತೆ ಇನ್ನೂ ಆಟವಾಡಿ ಕಾಲ ಕಳೆಯುವ ಹರೆಯ. ಆದರೆ ಈಕೆ ಅಷ್ಟಕ್ಕೆ ಸೀಮತವಾಗದೆ ಕರಾವಳಿಯಲ್ಲಿ ಹುಟ್ಟಿದರೂ ಇಡೀ ಕರುನಾಡಿನಲ್ಲಿ ತನ್ನ ಛಾಪು ಬೀರಿದ್ದಾರೆ. ಇವರೇ ನಟಿ, ನಿರೂಪಕಿ, ಕಲಾ ಪೋಷಕಿ, ಸಮಾಜ ಸೇವಕಿ ಆರಾಧನಾ ಭಟ್.


ಆರಾಧಾನಾ ಭಟ್ ಎಂದಾಕ್ಷಣ ನಮಗೆಲ್ಲ ನೆನಪಿಗೆ ಬರುವುದು ಮಜಾಭಾರತ ರಿಯಾಲಿಟಿ ಶೋ. 11ರ ಹರೆಯದಲ್ಲಿರುವಾಗಲೇ ಮಜಾಭಾರತ ರಿಯಾಲಿಟಿ ಶೋ ನಲ್ಲಿ ಪಾತ್ರ ವಹಿಸಿ ನಾಡಿನುದ್ದಕ್ಕೂ ಚಿರಪರಿಚಿತರಾಗಿದ್ದಾರೆ.
ಇದೆಲ್ಲ ಕಾರಣದಿಂದ ಹೆಚ್ಚಿನವರು ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಅವರ ಬಗ್ಗೆ ಕೇಳಿರುತ್ತೇವೆ. ಅವರ ವಾಯ್ಸ್ ಆಫ್ ಆರಾಧನಾ ಪೇಜ್ ತಂಡದ ಬಗ್ಗೆನೂ ಕೇಳಿರುತ್ತೇವೆ.
ಅವರು, ಅವರ ತಂಡ ಮಾಡಿದ ಕೆಲಸ ಕಾರ್ಯಗಳು ಬಹಳ ಅದ್ಭುತ. 200ಕ್ಕೂ ಅಧಿಕ ಕರ್ನಾಟಕದ ಪ್ರತಿಭೆಗಳಿಗೆ ಪ್ರತಿದಿನ ವಾಯ್ಸ್ ಆಫ್ ಆರಾಧನಾ ಪೇಜ್ ನಲ್ಲಿ ಟ್ಯಾಲೆಂಟ್ ಪ್ರದರ್ಶನ ಹಾಗೂ ಪ್ರತಿ ತಿಂಗಳು ಕಾರ್ಯಕ್ರಮ ಮಾಡಿ ಪ್ರತಿಭೆಗಳಿಗೆ ಉಚಿತವಾಗಿ ವೇದಿಕೆ ನೀಡುವುದು ಹಾಗೂ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ನೀಡುವುದು. 5 ವರ್ಷದಲ್ಲಿ 18 ಲಕ್ಷ ರೂ. ವರೆಗೆ ಸಹಾಯ ನೀಡಿದ ಹೆಗ್ಗಳಿಕೆ ಆರದಿರಲಿ ಬದುಕು ಆರಾಧನ ತಂಡದ್ದು.
ಪ್ರತಿ ತಿಂಗಳು10 ಪ್ರತಿಭೆಗಳಿಗೆ ಬಹುಮಾನ. ಪ್ರತಿ ವಾರ ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಗೆ ಸಾಧಕರ ಚಾವಡಿ ಮುಖಾಂತರ ಗುರುತಿಸುವಿಕೆ. ಹಲವಾರು ಪ್ರಾಯೋಜಕರ ಬಹುಮಾನ. ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಗೆ ಸುವರ್ಣ ಚಂದನ
ದೂರದರ್ಶನ, ಕಲ್ಲರ್ಸ್ ಕನ್ನಡ ರಿಯಾಲಿಟಿ ಶೋ ಗಳಿಗೆ ಅವಕಾಶ ದೊರೆತಿದೆ.
ಇವರು ಇದೇ 2 ವರ್ಷದ ಹಿಂದೆ ಕೊರೋನ ಸಮಯದಲ್ಲಿ ವಾಯ್ಸ್ ಆಪ್ ಆರಾಧನ ಪೇಜ್ ಪ್ರಾರಂಭ ಮಾಡಿ ಪ್ರತಿ ದಿನ ಟಾಸ್ಕ್ ಹಲವಾರು ಸ್ಪರ್ಧೆಗಳು,ಫಾದರ್ಸ್ ಡೇ ಗೆ ಕೆಲವು ಸ್ಪರ್ಧೆಗಳು ನಡೆಸಿದ್ದರು.
ಹಾಗೇನೇ ಈ ಸಂದರ್ಭದಲ್ಲಿ 400ಕ್ಕಿಂತಲೂ ಅಧಿಕ ಮನೆಗಳಿಗೆ ಕಿಟ್ ವಿತರಣೆ ಮಾಡಿದ ಕೀರ್ತಿ ಕೂಡ ಈ ತಂಡಕ್ಕಿದೆ.
ಆರಾಧನಾ ಯುವಪ್ರತಿಭೆ: ಆರಾಧನಾ ಭಟ್ ಅವರು ಆಳ್ವಾಸ್ ಕಾಲೇಜಿನಲ್ಲಿ B.Com ACCA ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ಇವರ ಇತರ ಚಟುವಟಿಕೆ ನಿಜವಾಗಿಯೂ ಪ್ರತಿಯೊಂದು ಹೆಣ್ಣುಮಗಳಿಗೂ ಸ್ಫೂರ್ತಿ, ಪ್ರೇರಣೆ ಎಂದರೆ ತಪ್ಪಿಲ್ಲ. ಬೇರೆ ಚಟುವಟಿಕೆಯಲ್ಲಿ ತೋಡಾಗಿಕೊಂಡರೆ ಶಿಕ್ಷಣದಲ್ಲಿ ಹಿಂದೆ ಬೀಳುತ್ತಾರೆ ಎಂಬ ಮಾತು ನಿಜವಾಗಿಯೂ ಸುಳ್ಳು ಎಂಬುವುದು ಇವರಿಂದ ನಾವು ಕಲಿಯಬಹುದು. ಯಾಕೆಂದರೆ ಎಷ್ಟು ಚಿಕ್ಕ ವಯಸ್ಸಲ್ಲಿ ಮಾಡಿರುವ ಸಾಧನೆಗೆ ನಾವು ತಲೆಬಾಗಬೇಕು. ಹತ್ತನೇ ತರಗತಿಯಲ್ಲಿ ಕೂಡ ಪಡೆದಿರುವ ಅಂಕ ಅದ್ಭುತ. ಹೌದು ಇದೆಲ್ಲದರ ಜೊತೆಗೆ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 96% ಪಡೆದಿದ್ದಾರೆ. ಇಷ್ಟೆಲ್ಲ ಅಲ್ಲದೆ ಬಹಳ ಚೆನ್ನಾಗಿ ಒಂದು ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಕೌಶಲ್ಯ ಹೊಂದಿದ್ದು, ಈ ಬಾರಿ ಆಳ್ವಾಸ್ ನಲ್ಲಿ ನಡೆದ ಜಾಂಬೂರಿಯ ಕಾರ್ಯಕ್ರಮದಲ್ಲಿ ಮುಖ್ಯ ವೇದಿಕೆಯಲ್ಲಿ ನಿರೂಪಣೆ ಮಾಡಿರುವ ಕೀರ್ತಿ ಅವರದ್ದು .
ಈಗಾಗಲೇ 12 ಚಿತ್ರಗಳಲ್ಲಿ (ಮುಖ್ಯವಾಗಿ ಅದಿತಿ ಪ್ರಭುದೇವ್ ಜೊತೆ ತಂಗಿ ಪಾತ್ರದಲ್ಲಿ ಖೇವೋಸ್ ಕನ್ನಡ ಚಿತ್ರದಲ್ಲಿ )
,ಕಲರ್ಸ್ ಕನ್ನಡದ ಮಜಾಭಾರತ ವೇದಿಕೆಯಲಿ, ಮಜಾಟಾಕೀಸ್ ನಲ್ಲಿ, ಹಲವಾರು ರಿಯಾಲಿಟಿ ಶೋಗಳಲ್ಲಿ, ಹತ್ತು ಹಲವಾರು ಜಾಹಿರಾತುಗಳಲ್ಲಿ ಮುಖ್ಯ ಮಂತ್ರಿಯ ಪುಣ್ಯ ಕೋಟಿ ಜಾಹಿರಾತು,ಮಲಬಾರ್ ಗೋಲ್ಡ್ ಅವರ ಜಾಹಿರಾತು, ಎಸ್.ಕೆ.ಎಫ್ ಅವರ ಜಾಹಿರಾತು, ಮಂಗಳೂರು ಸಿಟಿ ಅವರ ಜಾಹಿರಾತು, ಹಾಗೆಯೇ ಆರದಿರಲಿ ಬದುಕು ತಂಡದ ಜೊತೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಹಾಗೇನೇ ಇವರ ಈ ಸಾಧನೆಗೆ 700ಕ್ಕೂ ಅಧಿಕ ಬಹುಮಾನ ಪ್ರಶಸ್ತಿ ಲಭಿಸಿದೆ. ಮುಖ್ಯವಾಗಿ ಸೇವಾ ರತ್ನ, ಕರ್ನಾಟಕ ಪ್ರತಿಭಾ ರತ್ನ, ಉಡುಪಿ ಮಠಾಧೀಶರ ಕಲಾರತ್ನ, ದ.ಕ ಕನ್ನಡ ರಾಜೋತ್ಸವ ಪುರಸ್ಕಾರ ಮುಂತಾದವುಗಳಿಗೆ ಭಾಜನರಾಗಿದ್ದಾರೆ.
ಹೆಣ್ಣುಮಗಳಾಗಿ ಇಷ್ಟು ಸಾಧನೆ ಮಾಡಿದ್ದಾರೆ ಎಂದರೆ ಇವರ ಹಿಂದೆ ನಿಂತು ಪ್ರತಿಯೊಂದು ವಿಚಾರದಲ್ಲಿಯೂ ಪ್ರೋತ್ಸಾಹ ಸಲಹೆ ನೀಡುತ್ತಾ ಬಂದವರು ಇವರ ತಾಯಿ ಪದ್ಮಶ್ರೀ ಭಟ್.
ಹೌದು, ಎಲ್ಲರೂ ಹೇಳುವಾಗೆ ಒಂದು ಮಗುವಿಗೆ ತನ್ನ ತಾಯಿಯೇ ಮೊದಲ ಗುರುವಂತೆ. ಪದ್ಮಶ್ರೀ ಭಟ್ ಇವರು ಶಿಕ್ಷಕಿಯಾಗಿ , ಹಲವಾರು ವರ್ಷಗಳಲ್ಲಿ ಪತ್ರಕರ್ತೆಯಾಗಿ, ಟಿವಿ ವಾಹಿನಿಯ ವಾರ್ತಾ ವಾಚಕಿ ಯಾಗಿ ಕೆಲಸ ಮಾಡಿ ತನ್ನ ಮಗಳು ಸಾಧನೆಯ ಹಾದಿ ಹಿಡಿಬೇಕು ಅನ್ನೋ ಮಹೋನ್ನಾಸೆಯ ಸಲುವಾಗಿ ತನ್ನ ಮಗಳ ಪ್ರತಿಯೊಂದು ಹೆಜ್ಜೆಯಲ್ಲೂ ಸಹಕರಿಸುತ್ತಾ ಬಂದಿದ್ದಾರೆ. ನಿಮಂತಹ ತಾಯಿ ಪ್ರತಿಯೊಂದು ಹೆಣ್ಣುಮಗಳ ಹಿಂದೆಯೂ ಇರಬೇಕು.
ಒಬ್ಬ ಹೆಣ್ಣುಮಗಳಾಗಿ, ಇಷ್ಟು ಚಿಕ್ಕ ವಯಸ್ಸಿನ್ನಲ್ಲಿ ತಾವು ಹಾಗೂ ತಮ್ಮ ತಂಡದವರು ಮಾಡಿರುವ ಸಾಧನೆ ನಿಜವಾಗಿಯೂ ಅದ್ಭುತ.

-ಅಶೋಕ್ ನಾಯ್ಕ್ ಕಳಸಬೈಲ

ಇತ್ತೀಚಿನ ಸುದ್ದಿ

ಜಾಹೀರಾತು