6:37 PM Sunday27 - July 2025
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ

ಇತ್ತೀಚಿನ ಸುದ್ದಿ

ಗುತ್ತಿಗೆದಾರರಿಂದ ತುಘಲಕ್‌ ದರ್ಬಾರ್‌: ಕಾರ್ಕಳ ಬಿಜೆಪಿ ಆರೋಪ; ಪ್ರತಿಭಟನೆಯ ಎಚ್ಚರಿಕೆ

21/06/2023, 19:54

ಕಾರ್ಕಳ(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದಂದಿನಿಂದ ಕಾರ್ಕಳದಲ್ಲಿ ಒಬ್ಬರು ತಾನೇ ಜನಪ್ರತಿನಿಧಿಯ ತರಹ ತನ್ನ ತಂಡದೊಂದಿಗೆ ಯಾವುದಾದರೊಂದು ಇಲಾಖೆ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು, ಕೇಳದಿದ್ದಲ್ಲಿ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಒಂದು ವೇಳೆ ಇಂತಹ ಚಾಳಿ ಮುಂದುವರೆದಲ್ಲಿ ಈ ವಿಷಯವನ್ನೇ ಮುಂದಿಟ್ಟುಕೊಂಡು ಕಾರ್ಕಳ ಭಾರತೀಯ ಜನತಾ ಪಕ್ಷವು ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಚುನಾವಣಾ ಫಲಿತಾಂಶದ ದಿನ ಒಂದು ಕ್ಷಣಕ್ಕೆ ತಾನೇ ವಿಜಯಿ ಆಗಿದ್ದೇನೆಂದು ಬೀಗಿದ ಕಾರ್ಕಳದ ಗುತ್ತಿಗೆದಾರರೊಬ್ಬರು ಅದರ ಗುಂಗಿನಿಂದ ಹೊರಬಾರದೆ ಕಾರ್ಕಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹಾಗೂ ಇತರ ವೈದ್ಯರ ಹಾಗೂ ಸಿಬ್ಬಂಧಿಗಳ ಸಭೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಹರಡಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಒಬ್ಬ ಯಾವುದೇ ಹಂತದ ಜನಪ್ರತಿನಿಧಿ ಅಲ್ಲದವರು ಈ ತರಹ ಇಲಾಖೆಯ ಸಭೆ ನಡೆಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ. ಇಡೀ ಉಡುಪಿ ಜಿಲ್ಲೆಯ ಜನತೆ ಕಾಂಗ್ರೆಸ್‌ ಪಕ್ಷವನ್ನು ಎಲ್ಲ ಕಡೆ ತಿರಸ್ಕರಿಸಿದ್ದಾರೆ. ಆದರೂ ತಾನೇ ಜನಪ್ರತಿನಿಧಿಗಳಂತೆ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಯಾವುದೋ ಒಬ್ಬ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸರಕಾರಿ ಕಚೇರಿಯಲ್ಲಿ, ಇಲಾಖೆಯಲ್ಲಿ ಸಭೆ ನಡೆಸಬಹುದಾದರೆ ಕಾರ್ಕಳದ ಒಟ್ಟು 8 ಜನ ಸೋತ ಅಭ್ಯರ್ಥಿಗಳೂ ಇದೇ ತರಹ ಇನ್ನು ಅನುಕರಣೆ ಮಾಡಿದರೆ ಸರಕಾರಿ ಆಡಳಿತ ವ್ಯವಸ್ಥೆಯು ಕುಸಿಯುವ ಸಾಧ್ಯತೆ ಇದೆ.
ಇಂತಹ ಬೆದರಿಕೆ ತಂತ್ರವನ್ನು ಮುಂದುವರೆಸಿದರೆ ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಇದಕ್ಕೆ ತಕ್ಕುದಾದ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಹರೀಶ್ ಶೆಣೈ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು