ಇತ್ತೀಚಿನ ಸುದ್ದಿ
ಕ್ಷುಲ್ಲಕ ಕಾರಣ: ಮನೆಯವರೊಂದಿಗೆ ಜಗಳವಾಡಿ ಶಾಲಾ ಬಾಲಕಿ ನೇಣಿಗೆ ಶರಣು
21/06/2023, 14:56

ಮಂಗಳೂರು(reporterkarnataka.com): ನಗರದ ಹೊರವಲಯದ ಪಾಲ್ದಾನೆ ಬಳಿ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೀರುಮಾರ್ಗ ಸಮೀಪದ ಪಾಲ್ದಾನೆಯ ತೇಜತ್ (15) ಎಂಬಾಕೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಎಸೆಸ್ಸೆಲ್ಸಿ ಕಲಿಯುತ್ತಿದ್ದ ಈಕೆ ಮಂಗಳವಾರ ಸಂಜೆ ಶಾಲೆಯಿಂದ ಬಂದ ಬಳಿಕ ಕ್ಷುಲ್ಲಕ ಕಾರಣಕ್ಕೆ ಮನೆಯವರ ಜತೆ ಜಗಳ ಮಾಡಿದ್ದಳು ಎನ್ನಲಾಗಿದೆ.
ಅದೇ ಕೋಪದಿಂದ ಕೋಣೆಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.