4:46 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಚಿತ್ರದುರ್ಗದ ಕೆಂಚಣ್ಣರ ಪಾಲಿಗೆ ದೇವಾಲಯವಾದ ಸ್ನೇಹಾಲಯ!: 950ಕ್ಕೂ ಅಧಿಕ ಮಂದಿ ನಿರ್ಗತಿಕರಿಗೆ ಬದುಕು ಕೊಟ್ಟ ತಾಣ!!

20/06/2023, 12:31

ಸಹನಾ ವಿಟ್ಲ ಮಂಗಳೂರು

info.reporterkarnataka@gmail.com
ಸ್ನೇಹಾಲಯ… ಇದೊಂದು ಬರೇ ಅನಾಥಾಲಯ ಮಾತ್ರವಲ್ಲ, ನಿರಾಶ್ರಿತರಿಗೆ, ನಿರ್ಗತಿಕರಿಗೆ, ಬಡವರಿಗೆ, ಅನಾರೋಗ್ಯಪೀಡಿತರಿಗೆ ಸುರಕ್ಷಿತ ಆಶ್ರಯ ನೀಡುವ ದೇವಾಲಯ ಕೂಡ ಹೌದು. ಇದೀಗ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸಕಲ ವೈದ್ಯಕೀಯ ಚಿಕಿತ್ಸೆ ಜತೆಗೆ ಪೌಷ್ಠಿಕ ಆಹಾರವನ್ನು ನೀಡಿ ಅವರನ್ನು ಅರೋಗ್ಯವಂತರನ್ನಾಗಿ ಮಾಡಿ ಮನೆ ಮಂದಿಗೆ ಹಸ್ರಾಂತರಿಸುವಲ್ಲಿ ಯಶಸ್ವಿಯಾಗಿದೆ.
2021 ಜನವರಿ 19 ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಉಪ್ಪಳ- ಕಾಸರಗೋಡು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಕೆಂಚಣ್ಣ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದರು. ಅವರು ಮಾನಸಿಕ ಅಸ್ವಸ್ಥರಂತೆ ತೋರುತ್ತಿದ್ದುದಲ್ಲದೆ ಅತ್ಯಂತ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದರು.

ಅನ್ನ ಆಹಾರವಿಲ್ಲದೆ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ಅವರನ್ನು ಮುಂದಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು . ಮನೋವೈದ್ಯಕೀಯ ಸಲಹೆಗಾರರು ಮತ್ತು ವೈದ್ಯಕೀಯ ತಂಡವು ಅವರಿಗೆ ಸೂಕ್ತ ಆರೈಕೆ ಮತ್ತು ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಯಿತು.


ಔಷಧಿಗಳ ಜೊತೆಗೆ, ವಿವಿಧ ಚಿಕಿತ್ಸಕ ಚಟುವಟಿಕೆಗಳು ಮತ್ತು ಸಮಾಲೋಚನೆ ಅವಧಿಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಪ್ರೆರೇಪಿಸಲಾಯಿತು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ, ನಮ್ಮ ಸಾಮಾಜಿಕ ಕಾರ್ಯಕರ್ತರು ಅವರ ಕುಟುಂಬವನ್ನು ತಲುಪಲು ಸಾಧ್ಯವಾಯಿತು. ಫೋನ್ ಕಾಲ್ ಮೂಲಕ ಕೌಟುಂಬಿಕ ಸಮಾಲೋಚನೆಯಲ್ಲಿ ಕೆಂಚಣ್ಣ ಕೂಡ ಭಾಗವಹಿಸಿದರು. ನಂತರ ಮನೋವೈದ್ಯಕೀಯ ಸಮಾಜ ಸೇವಕರು ದಿನಾಂಕ 18/06/2023 ರಂದು ಸ್ನೇಹಾಲಯದಲ್ಲಿ ಕೌಟುಂಬಿಕ ಮಿಲನವನ್ನು ಆಯೋಜಿಸದರು. ಕೆಂಚಣ್ಣ ಅವರನ್ನು ಬರಮಾಡಿಕೊಳ್ಳಲು ಅವರ ಪತ್ನಿ ಹಾಗೂ ತಾಯಿ ಸ್ನೇಹಾಲಯಕ್ಕೆ ಆಗಮಿಸಿದರು. ಜೀವಂತವಿರುವ ಹಾಗೂ ಸುಸ್ಥಿತಿಯಲ್ಲಿರುವ ಆತನನ್ನು ಕಂಡು ಪತ್ನಿ ಹಾಗೂ ತಾಯಿ ಕಣ್ಣೀರಿಟ್ಟರು. ಕೆಂಚಣ್ಣ ಮತ್ತೆ ತನ್ನ ಕುಟುಂಬವನ್ನು ಹಾಗೂ ಮನೆಯನ್ನು ಸೇರುವುದು ನಿಜಕ್ಕೂ ಸ್ನೇಹಾಲಯ ಕುಟುಂಬಕ್ಕೆ ಸಂತೋಷ ಮತ್ತು ಆನಂದದಾಯಕವಾಗಿದೆ. ಸ್ನೇಹಾಲಯವು ಈವರೆಗೆ ಸುಮಾರು 950 ಕ್ಕಿಂತಲೂ ಅಧಿಕ ಪುನರ್ ಮಿಲನಕ್ಕೆ ಸಾಕ್ಷಿಯಾಗಿದ್ದು, ಅನಾಥರಾಗಿ ರಸ್ತೆ ಬದಿಯಲ್ಲಿ ಶೋಚನೀಯಯ ಸ್ಥಿತಿಯಲ್ಲಿದ್ದವರು, ಹೀಗೆ ಗುಣಮುಖರಾಗಿ ಮತ್ತೆ ತಮ್ಮ ಕುಟುಂಬವನ್ನು ಸೇರಿದಾಗ ಅದು ನಮಗೆ ನಿಜವಾದ ತೃಪ್ತಿ ಮತ್ತು ಸಂತೋಷವನ್ನು ನೀಡುತ್ತದೆ

ಇತ್ತೀಚಿನ ಸುದ್ದಿ

ಜಾಹೀರಾತು