3:11 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಮತ್ತು ಪ್ರಣತಿ ಆಯ್ಕೆ

16/06/2023, 13:45

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಹಾಗೂ ಪ್ರಣತಿ ಆಯ್ಕೆಯಾಗಿದ್ದಾರೆ.
ನಿತಾಯ್ ಕೃಷ್ಣ ಡಿ. ಮೇಂಡನು ಬೆಂಗಳೂರಲ್ಲಿ ನೆಲೆಸಿರುವ ದುರ್ಗಾಪ್ರಸಾದ್ ಎಂ ಮತ್ತು ವಿಂಧ್ಯಾ ಇವರ ದ್ವಿತೀಯ ಪುತ್ರ. ಕೇಂದ್ರೀಯ ವಿದ್ಯಾಲಯ- ಡಿ.ಆರ್..ಡಿ.ಓ , ಬೆಂಗಳೂರು ಇಲ್ಲಿ ಹತ್ತನೇ ತರಗತಿಯನ್ನು 89%(CBSE) ಅಂಕಗಳೊಂದಿಗೆ ಉತ್ತೀರ್ಣವಾಗಿ ಸದ್ಯ ಎಕ್ಸಲೆಂಟ್ ಪಿ.ಯು.ಕಾಲೇಜ್, ಮೂಡಬಿದ್ರೆಯಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾನೆ. ಈತನು ಕೆ.ಪಿ.ಚಂದ್ರಕುಮಾರ್ ಇವರಲ್ಲಿ ಕರಾಟೆ ಮಾರ್ಗದರ್ಶನ ಪಡೆದು 2020 ರ ಜನವರಿಯಲ್ಲಿ “2 nd Dan Black Belt” ಪಡೆದಿರುತ್ತಾನೆ. ಹಲವು ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ 50 ಕ್ಕೂ ಹೆಚ್ಚು ಬಹುಮಾನ , 25 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾನೆ.
ಸಬ್ಬಣಕೋಡಿ ರಾಮ ಭಟ್ ಗುರುಗಳಲ್ಲಿ ಯಕ್ಷಗಾನ ನಾಟ್ಯವನ್ನು ಕಲಿತು ಹಲವಾರು ಪ್ರಸಂಗಳಲ್ಲಿ ದೇವೇಂದ್ರನ ಬಲ,ಅಭಿಮನ್ಯು, ಅರ್ಜುನ, ಶ್ರೀ ಕೃಷ್ಣ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾನೆ.
ಯಕ್ಷಗಾನ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಹಲವು ಸನ್ಮಾನ, ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.


ಕೇಂದ್ರೀಯ ವಿದ್ಯಾಲಯ ಸಂಘಟನದವರು ನಡೆಸಿದ ಕಲೋತ್ಸವ ಸ್ಪರ್ಧೆಯಲ್ಲಿ ಯಕ್ಷಗಾನ ನೃತ್ಯ ಮಾಡಿ ರಾಷ್ಟ್ರ ಮಟ್ಟದಲ್ಲಿ ಅಭಿನಂದನಾ ಪತ್ರ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ.
ಹೆಮ್ಮೆಯ ಕನ್ನಡಿಗ, ಕನ್ನಡ ಕಂಠೀರವ, ಕರ್ನಾಟಕ ಟೈಗರ್, ಕರ್ನಾಟಕ ರತ್ನ , ಭಾರತ ರತ್ನ ಮುಂತಾದ ಪ್ರಶಸ್ತಿ ಗಳನ್ನು ಪಡೆದಿರುತ್ತಾನೆ.
ಇಷ್ಟೇ ಅಲ್ಲದೆ ಸ್ಕೇಟಿಂಗ್, ಬ್ಯಾಡ್ಮಿಂಟನ್, ಪಿಯಾನೋ ಮತ್ತು ಕೊಳಲು ವಾದನವನ್ನು ತನ್ನ ಹವ್ಯಾಸವನ್ನಾಗಿ ಅಭ್ಯಸಿಸುತ್ತಿದ್ದಾನೆ.
ಬಂಟ್ವಾಳ ತಾಲೂಕಿನ ವಿಟ್ಲದ ಮಾವೆ ಮನೆ ನಿಡ್ಯಾ ಎಂಬಲ್ಲಿನ ನಟೇಶ್ ಪಾವನ ದಂಪತಿ ಮಗಳಾದ ಪ್ರಣತಿ, ವಿಟ್ಲ ಜೆಸಿಸಿ ಇಂಗ್ಲಿಷ್ ಮೀಡಿಯಾ ಸ್ಕೂಲ್ ನಲ್ಲಿ 5ನೆ ತರಗತಿ ಓದುತ್ತಿದ್ದಾಳೆ.
ನೃತ್ಯ, ಯಕ್ಷಗಾನ. ಚಿತ್ರ ಬಿಡಿಸುವುದು, ಸ್ಟ್ಯಾಂಪ್ ಸಂಗ್ರಹ ಇವಳ ಹವ್ಯಾಸ. ಯಕ್ಷಗಾನ ಸೇವಾ ಪ್ರತಿಷ್ಟನಾದಲ್ಲಿ ಗುರುಗಳಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಬ್ಬಣ್ಣ ಕೊಡಿ ರಾಮ ಭಟ್ ಇವರಲ್ಲಿ ಯಕ್ಷಗಾನ ಕಲಿತುಕೊಂಡೆ ಹಲವಾರು ಕಡೆ ಯಕ್ಷಗಾನ ಪ್ರದರ್ಶನ ನೀಡಿ ಶಭಾಷ್ ಪಡೆದುಕೊಂಡಿದ್ದಾಳೆ ಶಾರದಾ ಜಲ್ಲಿ ಫೋಟೋ ಸ್ಪರ್ಧೆ ಮೂಲಕ ವಾಯ್ಸ್ ಆಫ್ ಆರಾಧನಕ್ಕೆ ಪಾದಾರ್ಪಣೆ ಮಾಡಿ ಈ ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆ ಹಲವು ಕಡೆ ವೇದಿಕೆಗಳಲ್ಲಿ ನೃತ್ಯ ಕೂಡ ನೀಡಿದ್ದಾರೆ. ಸಾಂಸ್ಕೃತ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ನೆಲ್ಲಿ ತೀರ್ಥ ಸಾಂಸ್ಕೃತ ಕಾರ್ಯ ಕ್ರಮದಲ್ಲಿ ಸೇವಾ ರತ್ನ ಪ್ರಶಸ್ತಿ ಪಡೆದು ಕೊಂಡಿದ್ದಾರೆ. ಹಾಗೆ ತತ್ವಮಸಿಯಲ್ಲಿ ಚಿತ್ರ ಕಲಾ ತರಬೇತಿ ಪಡೆಯುತ್ತಿ ದ್ದಾರೆ. ಪ್ರಸಿದ್ದ ಚೆಸ್ ಆಟಗಾರ ರೋಹಿತ್ ಕುಮಾರ್ ಇವರಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು