ಇತ್ತೀಚಿನ ಸುದ್ದಿ
ವಿದ್ಯುತ್ ಶಾಕ್‌ನಿಂದ ಸಣ್ಣ ಉದ್ಯಮಗಳು ವಲಸೆ: ಶಾಸಕ ಡಾ.ಭರತ್ ಶೆಟ್ಟಿ
13/06/2023, 16:06

ಸುರತ್ಕಲ್(reporterkarnataka.com): ಕಾಂಗ್ರೆಸ್ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಗ್ಯಾರಂಟಿ ಜಾರಿ ಮಾಡಿ ಸಣ್ಣ ಉದ್ಯಮಗಳಿಗೆ ಹೊಡೆತ ನೀಡಿದೆ. ಬಹುತೇಕ ಸಣ್ಣ ಪುಟ್ಟ ಕಂಪನಿಗಳು ನಷ್ಟ ಭೀತಿಯಿಂದ ಮಹಾರಾಷ್ಟ್ರ,ಕೇರಳ ಸಹಿತ ಗಡಿ ಭಾಗದ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿವೈ ಆರೋಪಿಸಿದ್ದಾರೆ.
ಶೇ. 30-40ರಷ್ಟು ವಾಣಿಜ್ಯ ವಿದ್ಯುತ್ ದರ ಏರಿಕೆ ಉದ್ಯಮಿಗಳಲ್ಲಿ ಆಘಾತ ಉಂಟುಮಾಡಿದೆ. ಸ್ಪರ್ಧಾತ್ಮಕ ವ್ಯವಹಾರದ ನಡುವೆ ‘ಉತ್ಪಾದನಾ ವೆಚ್ಚ ಹೆಚ್ಚಾಗಿ ಅನ್ಯ ರಾಜ್ಯಗಳ ಪೈಪೋಟಿ ಎದುರಿಸಲು ಕಷ್ಟವಾಗುತ್ತದೆ. ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ನಷ್ಟದಿಂದ ಪಾರಾಗಲು ಕಂಪನಿಗಳ ಅನ್ಯ ರಾಜ್ಯದತ್ತಾ ವಲಸೆ ಯತ್ನ ಆರಂಭವಾಗಿದೆ.
ಅಧಿಕಾರದ ಲಾಲಸೆಯಿಂದ ಗಂಭೀರ ಪರಿಣಾಮಗಳ ಬಗ್ಗೆ ಯೋಚಿಸದೆ ಹಿರಿಯ ಆಧಿಕಾರಿಗಳ ಮೇಲೆ ಒತ್ತಡ ಬೀರಿ ಗ್ಯಾರಂಟಿ ಜಾರಿ ಮಾಡುತ್ತಿರುವ ಈ ಸರಕಾರದ ನಿರ್ಧಾರದಿಂದ ಸಾಮಾನ್ಯ ಜನರೇ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಡಾ.ಭರತ್ ಶೆಟ್ಟಿ ಆತಂಕ ವ್ಯಕ್ತ ಪಡಿಸಿದ್ದಾರೆ.