ಇತ್ತೀಚಿನ ಸುದ್ದಿ
ಕಾಂಗ್ರೆಸ್ ಗೆ ಲಕ್ಷ್ಮಣ ಸವದಿ ಬಿಗ್ ಶಾಕ್: ನಿಗಮ- ಮಂಡಳಿಗಳ ಸ್ಥಾನವನ್ನು ಪರೋಕ್ಷವಾಗಿ ನಿರಾಕರಿಸಿದ ಅಥಣಿ ಶಾಸಕಾ
29/05/2023, 19:23
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸಚಿವ ಸ್ಥಾನ ಸಿಗದೆ ನಿರಾಶರಾದ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪರೋಕ್ಷವಾಗಿ ತಿರಸ್ಕರಿಸಿ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಸಚಿವ ಸ್ಥಾನ ತಪ್ಪಿದ ಶಾಸಕರಿಗೆ ಸೂಕ್ತ ಸ್ಥಾನಮಾನ ಎಂದ್ದಿದ ಕಾಂಗ್ರೆಸ್ ವರಿಷ್ಠರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸವದಿ, ನಿಗಮ- ಮಂಡಳಿಗಳಲ್ಲಿ ಸ್ಥಾನಮಾನವನ್ನು
ನಯವಾಗಿ ತಿರಸ್ಕರಿಸಿದರು. ಜಡ್ಜ್ ಆದವರಿಗೆ ಪಟ್ಟೆವಾಲಾ ಆಗು ಅಂದ್ರೆ ಹೆಂಗೆ ಎಂದು ಸವದಿ, ಮಾದ್ಯಮಕ್ಕೆ ಮರು ಪ್ರಶ್ನೆ ಮಾಡಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸವದಿ, ನನಗೆ ಸಚಿವ ಸ್ಥಾನ ಸಿಗದ ಬಗ್ಗೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇದು ಸಹಜವಾಗಿ ಇರುವುದು. ಒಟ್ಟು ಸಚಿವ ಸ್ಥಾನ 34. ಈ ಬಾರಿ ಕಾಂಗ್ರೆಸ್ನಲ್ಲಿ ಹಳಬರು ಆಯ್ಕೆ ಆಗಿದ್ದಾರೆ. ಅವರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ನಾವು ಈಗ ಅಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಮನುಷ್ಯನಿಗೆ ರಾಜಕಾರಣದಲ್ಲಿ ದೂರದೃಷ್ಟಿ ಹಾಗೂ ತಾಳ್ಮೆ ಬೇಕು. ಇವು ಎರಡು ಇದ್ದರೆ ರಾಜಕಾರಣ ನಡೆಯುತ್ತದೆ ಎಂದರು.
ರಾಜಕಾರಣದಲ್ಲಿ ನನಗೆ ನಿರೀಕ್ಷೆ ಇತ್ತು, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ. ಸಚಿವರಾಗಬೇಕು, ಡಿಸಿಎಂ, ಸಿಎಂ ಆಗ್ಬೇಕು ಎಂದು ಆಸೆ ಇರುತ್ತೆ ಮನುಷ್ಯ ಸಹಜವಾಗಿ ಆಸೆ ಇರುತ್ತದೆ ಎಂದು ಸವದಿ ಪರೋಕ್ಷವಾಗಿ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಯಬೇಕು. ನಂತರ ಸರ್ವೆ ಕಾರ್ಯ ಕೈಗೆ ಬರಬೇಕು. ನಂತರ ಅದಕ್ಕೆ ಗೈಡೆನ್ಸ್ ಫಿಕ್ಸ್ ಮಾಡಿದ ನಂತರವೇ ಎಲ್ಲವೂ ಜಾರಿ ಆಗುತ್ತೆ. ಈಗಾಲೇ ಸಚಿವ ಸಂಪುಟ ಇದರ ಬಗ್ಗೆ ಕಾರ್ಯಪ್ರವೃತ್ತವಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಲ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದರು.
ಮುಂದಿನ ತಿಂಗಳು ಈ ಗ್ಯಾರಂಟಿ ಯೋಜನೆ ಜಾರಿ ಆಗಬಹುದು ಎಲ್ಲಾ ಮಂತ್ರಿಗಳು ಇದರ ಸಲುವಾಗಿ ಕಾರ್ಯ ಪ್ರಮುಖರಾಗಿದ್ದಾರೆ ಮೊದಲಿಗೆ ಅದಕ್ಕೆ ಆದ್ಯತೆ ನೀಡಲಾಗಿದೆ, ಸುಮ್ಮನೆ ಈಗ ನಾವು ಮಾತನಾಡುವುದು ಅಪ್ರಸ್ತುತ ಎಂದು ಸವದಿ ಹೇಳಿದರು.
ಎರಡುವರೆ ವರ್ಷ ಮಾತ್ರ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ನನಗೆ ಕೇಳಿದರೆ ಹೆಂಗೆ? ನನಗೆ ಏನು ಗೊತ್ತಿಲ್ಲ, ನೀವು ಸಿದ್ದರಾಮಯ್ಯ ಅವರನ್ನು ಕೇಳಬೇಕು. ಹೈಕಮಾಂಡ್ ಮದ್ಯದಲ್ಲಿ ಯಾವ ಚರ್ಚೆ ಆಗಿದ್ದಾವೆ ಗೊತ್ತಿಲ್ಲ, ನಾಲ್ಕು ಗೋಡೆಗಳ ಮದ್ಯೆ ಚರ್ಚೆ ಆಗಿರುವುದು ಇದರಲ್ಲಿ ಹೈಕಮಾಂಡ್, ಡಿಕೆಸಿ, ಸಿಎಂ ಸಿದ್ದರಾಮಯ್ಯ ನಡುವೆ ನಡೆದ ವಿಚಾರ ಏನು ಚರ್ಚೆ ಆಗಿದೆ ಎಂಬುದನ್ನು
ಇನ್ನು ಯಾರು ಬಹಿರಂಗ ಪಡಿಸಿಲ್ಲ.
ಹೊರಗಡೆ ಎಲ್ಲವೂ ಊಹಾಪೋಹಗಳು ಮಾತುಗಳೂ ಕೇಳಿ ಬರುತ್ತಿದೆ ಇದಕ್ಕೆ ಕೆಲವರು ರೆಕ್ಕೆ ಪುಕ್ಕ ಕಟ್ಟಿ ಕಾಗೆ ಹಾರಿಸುತ್ತಿದ್ದಾರೆ, ನಾನು ಎರಡು ವರ್ಷದ ನಂತರ ಸಚಿವ ಆಗುತ್ತೇನೆ ಎಂಬುದು ಯಾರ ಜೊತೆ ಮಾತುಕತೆ ಆಗಿಲ್ಲಾ.
ನನಗೆ ಯಾರೂ ಆಶ್ವಾಸನೆ ಕೊಟ್ಟಿಲ್ಲ ನಾನು ಬಿಸಿಲು ಕುದುರೆ ನೋಡಿ ಓಡುವ ವ್ಯಕ್ತಿಯಲ್ಲ ಎಂದು ಹೇಳಿದರು.