ಇತ್ತೀಚಿನ ಸುದ್ದಿ
ಬಸ್ ನಿಲುಗಡೆಗೆ ಆಗ್ರಹಿಸಿ ಕಾಗವಾಡ- ವಿಜಯಪುರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ: 4 ತಾಸು ಸಂಚಾರ ತಡೆ
29/05/2023, 17:33
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಖೋತ ಕ್ರಾಸ್ ಮೂಲಕ ಸಂಚರಿಸುವ ಎಲ್ಲ ಘಟಕದ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಕಾಗವಾಡ-ವಿಜಯಪುರ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರು ಸುಮಾರು 4 ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರ ಸಂತೋಷ ಕದಂ ಮಾತನಾಡಿ, ಖೋತನಟ್ಟಿ ಕ್ರಾಸ್ ನಲ್ಲಿ ಬಸ್ ನಿಲ್ಲಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಮೇ 10ರಂದು ನಡೆದ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದಾಗ ಎರಡು ಬಾರಿ ಆಗಮಿಸಿ ಸಂಧಾನ ಸಭೆ ನಡೆಸಿ ಕೆಎಸ್‌ಆರ್ ಟಿಸಿ ಅಧಿಕಾರಿಗಳು ಹಾಗೂ ತಹಸೀಲ್ದಾರರು ಬಸ್ ನಿಲ್ಲಿಸುವ ಆದೇಶ ಹೊರಡಿಸಿದ್ದರಿಂದ ಮತದಾನ ಮಾಡಿದ್ದೇವೆ.
ಇದೀಗ ಅಥಣಿ, ಚಿಕ್ಕೋಡಿ ಮತ್ತು ಬೆಳಗಾವಿ ಘಟಕದ ಬಸ್‌ಗಳು ಮಾತ್ರ ನಿಲ್ಲುತ್ತಿವೆ. ವಿಜಯಪುರ ಘಟಕದ ಬಸ್ ನಿಲ್ಲಿಸುವಂತೆ ವಿಜಯಪುರ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರೊಂದಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿ ಮನವರಿಕೆ ಮಾಡಿದಾಗ ನಾಳೆಯಿಂದಲೇ ಬಸ್ ನಿಲುಗಡೆಗೊಳಿಸಲಾಗುವುದು ಹಾಗೂ ಕಂಟ್ರೋಲ್‌ರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.