ಇತ್ತೀಚಿನ ಸುದ್ದಿ
ಎನ್ನೆಸ್ಸೆಸ್ ನಿಂದ ಸ್ವ ಉದ್ಯೋಗ ಮಾಹಿತಿ: ಕೇಪುವಿನ ಪ್ರಗತಿಪರ ಕೃಷಿಕರ ಮನೆಯಲ್ಲಿ ಜೇನು ಕೃಷಿ ಮಾಹಿತಿ
29/05/2023, 10:25
ಬಂಟ್ವಾಳ(reporterkarnataka.com): ಇಲ್ಲಿನ ಮೊಡಂಕಾಪು ಕಾರ್ಮೆಲ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ಬಂಟ್ವಾಳ ತಾಲ್ಲೂಕು ಕೇಪು ಗ್ರಾಮದ ರಾಜ್ಯಮಟ್ಟ ಪ್ರಶಸ್ತಿ ವಿಜೇತ, ಪ್ರಾಪ್ತಿ ಎಂಟರ್ ರ್ಪ್ರೈಸಸ್ ಮಾಲಕ ಹಾಗೂ ಪ್ರಗತಿ ಪರ ಜೇನು ಕೃಷಿಕರದ ಶ್ರೀಯುತ ಸುಧಾಕರ ಪೂಜಾರಿಯವರ ಮನೆಗೆ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಜೇನು ಕೃಷಿಯ ಬಗ್ಗೆ ಶಿಕ್ಷಕರಾದ
ಕೃಷ್ಣ ಮಾಣಿ ಅವರು ಸಂಪೂರ್ಣ ಮಾಹಿತಿ ನೀಡಿದರು. ಕಾಲೇಜಿನ 45 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲಾರದ ಡಾ ಲತಾ ಫೆರ್ನಾಂಡಿಸ್ ಎ. ಸಿ., ಎನ್ನೆಸ್ಸೆಸ್ ಯೋಜನಾಧಿಕಾರಿ
ಕೀರ್ತನ್ ನಾಯ್ಕ್, ಉಪನ್ಯಾಸಕರಾದ ವಿಜೇತ ಕುಲಾಲ್, ನಿಹಾರಿಕಾ ಶೆಟ್ಟಿ ಹಾಗೂ ಜೇನು ಕೃಷಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.