8:53 AM Sunday19 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ಮಾಗುಂಡಿ ಹೊಸ ಸೇತುವೆ ದನಗಳ್ಳರಿಗೆ ವರದಾನವಾಯಿತೇ?: ಗೋವುಗಳ ತಲೆ, ಕಾಲುಗಳು ಪತ್ತೆ

28/05/2023, 13:35

ಚಿಕ್ಕಮಗಳೂರು(reporterkarnataka.com): ಎರಡು ಗೋವುಗಳ ತಲೆ, ಎಂಟು ಕಾಲು ಹಾಗೂ ಮೂಳೆಗಳು ನೂತನವಾಗಿ ನಿರ್ಮಿಸಿರುವ ಸೇತುವೆ ಬಳಿ ಪತ್ತೆಯಾಗಿರೋ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಬಳಿ ನಡೆದಿದೆ.

ಪ್ರತಿ ಮಳೆಗಾಲದಲ್ಲೂ ಮಾಗುಂಡಿ ಸಮೀಪದ ಮಹಲ್ಗೋಡು ಸೇತುವೆ ಸಂಪೂರ್ಣ ಮುಳುಗುತ್ತಿತ್ತು. ಯಾವ ಮಟ್ಟಕ್ಕೆ ಅಂದ್ರೆ ದಿನಕ್ಕೆ ಐದಾರು ಬಾರಿ ಗಂಟೆಗಟ್ಟಲೇ ಸೇತುವೆ ಮೇಲೆ ಐದಾರು ಅಡಿ ನೀರು ಹರಿಯುತ್ತಿತ್ತು. ಬಾಳೆಹೊನ್ನೂರು-ಕಳಸ ಮುಖ್ಯ ಮಾರ್ಗದ ಈ ರಸ್ತೆಯಲ್ಲಿ ಗಂಟೆಗಟ್ಟಲೇ ವಾಹನ ಸಂಚಾರ ಕೂಡ ಜಾಮ್ ಆಗುತ್ತಿತ್ತು. ಹಾಗಾಗಿ, ಸ್ಥಳಿಯರ ಹಲವು ವರ್ಷಗಳ ಬೇಡಿಕೆಯಂತೆ ಈ ಬಾರಿ ಈ ಮಹಲ್ಗೋಡು ಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣವಾಗಿದೆ. ಊರಿನಿಂದ ಸ್ವಲ್ಪ ದೂರದಲ್ಲಿ ಇರುವ ಈ ಸೇತುವೆ ದನಗಳ್ಳರಿಗೆ ವರದಾನವಾದಂತೆ ಕಾಣುತ್ತಿದೆ. ಏಕೆಂದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ದನಗಳ್ಳರ ಹಾವಳಿ ಹೊಸತೇನಲ್ಲ. ದಶಕಗಳಿಂದ ನೂರಾರು ರಾಸುಗಳು ದನಗಳ್ಳರ ಪಾಲಾಗಿವೆ. ಕಾರುಗಳಲ್ಲಿ ದನಗಳನ್ನ ಸಾಗಿಸೋದು ಕಷ್ಟ. ಗೋಮಾಂಸವನ್ನ ಸಾಗಿಸೋದು ಸುಲಭ. ಹಾಗಾಗಿ, ಸ್ವಲ್ಪ ಎತ್ತರದಲ್ಲಿ ನಿರ್ಮಾಣವಾಗಿರೋ ಸೇತುವೆ ದನಗಳ್ಳರ ಪಾಲಿಗೆ ವರವಾದಂತೆ ಕಾಣುತ್ತಿದೆ. ರಾತ್ರಿ ವೇಳೆಯಲ್ಲಿ ಜನಸಾಮಾನ್ಯರ ಓಡಾಟ ಕಡಿಮೆ ಇರುವ ಈ ಸೇತುವೆ ಕೆಳಭಾಗದಲ್ಲಿ ಸಮೃದ್ಧ ಜಾಗವಿರೋದ್ರಿಂದ ದನಗಳ್ಳರು ಅದೇ ಸೇತುವೆ ಕೆಳಗೆ ದನಗಳನ್ನ ಕಡಿದು ತಲೆ-ಕಾಲುಗಳನ್ನ ಅಲ್ಲೇ ಬಿಟ್ಟು ಮಾಂಸವನ್ನ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಳೆದ ಎರಡು ದಿನದ ಹಿಂದೆ ಮೂಡಿಗೆರೆ ತಾಲೂಕಿನ ರಾಸುವೊಂದು ಕಳ್ಳತನವಾಗಿತ್ತು. ಈ ರಾಸು ಅದೇ ಇರಬಹುದಾ ಎಂದು ಸ್ಥಳಿಯರು ಅಂದಾಜು ಕೂಡ ಮಾಡಿದ್ದಾರೆ. ಆದರೆ, ಮಲೆನಾಡಲ್ಲಿ ಆಗಿಂದಾಗ್ಗೆ ಮೇಲಿಂದ ಮೇಲೆ ರಾಸುಗಳ ಮೂಲಕವೇ ಜೀವನ ಕಟ್ಟಿಕೊಂಡವರ ರಾಸುಗಳು ಕೂಡ ಕಳ್ಳತನವಾಗುತ್ತಿವೆ. ಹಾಗಾಗಿ, ಮಲೆನಾಡಿಗರು ಈ ಗೋಕಳ್ಳರ ಹಾವಳಿಗೆ ಎಂದು ಬ್ರೇಕ್ ಬೀಳುವುದೋ ಎಂದು ಗೋಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು