ಇತ್ತೀಚಿನ ಸುದ್ದಿ
ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರ, ಲಂಚಾವತಾರ: ರೈತ ಮುಖಂಡರಿಂದ ವಿರೋಧ; ಹೋರಾಟದ ಎಚ್ಚರಿಕೆ
27/05/2023, 16:45
ರಾಹುಲ್ ಅಥಣಿ ಬೆಳಗಾವಿ
info.reporterkarnataka e-mail.com
ಬೆಳಗಾವಿ ಜಿಲ್ಲೆಯ ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭಾರೀ ಭ್ರಷ್ಡಾಚಾರದ ಆರೋಪ ಕೇಳಿ ಬರುತ್ತಿದೆ. ಇಲ್ಲಿ ಪ್ರತಿಯೊಂದು ಕೆಲಸಕ್ಕೂ 10ರಿಂದ 15 ಸಾವಿರ ಲಂಚ ಕೇಳುವುದು ಮಾಮೂಲಿಯಾಗಿ ಹೋಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯ ಲಂಚಾವತಾರ, ಭ್ರಷ್ಟಾಚಾರ ಕಂಡು ರೋಸಿ ಹೋದ ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ. ಅಥಣಿ ಸಬ್ ರಿಜಿಸ್ಟ್ರಾರ್ ಕಲಾವತಿ ಮಾಲವಾಡಿ ಅವನ್ನು ರೈತ ಮುಖಂಡರು ತರಾಟೆ ತೆಗೆದುಕೊಂಡಿದ್ದಾರೆ. ಪ್ರತಿಯೊಂದು ನೋಂದಣಿಗೆ ಹೆಚ್ಚುವರಿಯಾಗಿ 15 ಸಾವಿರ ರೂ. ಅಧಿಕಾರಿಗೆ ಪಾವತಿಸಬೇಕು ಎಂಬ ಆರೋಪ ಕೇಳಿ ಬರುತ್ತಿದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ದಲ್ಲಾಳ್ಳಿಗಳು ಜಾಸ್ತಿಯಾಗಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಾರೆ.
ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿಗಳು ದಲ್ಲಾಳಿಗಳ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ಲಂಚ ಹಣ ದಲ್ಲಾಳಿಗಳ ಖಾತೆಗೆ ಬಂದು ಅಲ್ಲಿಂದ ಅಧಿಕಾರಿಗಳ ಖಾತೆಗೆ ವರ್ಗಾವಣೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದ ಜನಸಾಮಾನ್ಯರು ಬೇಸತ್ರು ಹೋಗಿದ್ದಾರೆ.ವ್ಯವಸ್ಥೆ ಸರಿ ಹೊಂದದಿದ್ದರೆ ಉಗ್ರ ಹೋರಾಟ ಎಚ್ಚರಿಕೆ ನೀಡಿದ ರೈತ ಮುಖಂಡ ಮಹದೇವ ಮಡಿವಾಳ ಎಚ್ಚರಿಕೆ ನೀಡಿದ್ದಾರೆ.