ಇತ್ತೀಚಿನ ಸುದ್ದಿ
ಸರಕಾರಿ ಬಸ್ಸಿನಲ್ಲಿ ಹೆತ್ತಳಾ ತಾಯಿ!: ಹೆಣ್ಣು ಮಗುವಿಗೆ ಜನ್ಮ; ಮಾನವೀಯತೆ ಮೆರೆದ ಚಾಲಕ ಮತ್ತು ನಿರ್ವಾಹಕಿ
16/05/2023, 19:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರಯಾಣಿಸುತ್ತಿದ್ದ ಬಸ್‌ನಲ್ಲೇ ಗರ್ಭಿಣಿ ಮಹಿಳೆಯೊಬ್ಬರು ಹೆಣ್ಣು ಮಗುವಿನ ಜನ್ಮ ನೀಡಿದ ಘಟನೆ ಚನ್ನರಾಯಪಟ್ಟಣ-ಹಾಸನ ಮಾರ್ಗ ಮಧ್ಯೆ ಸಾರಿಗೆ ಬಸ್‌ನಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆ ಮೂಡಿಗೆರೆಗೆ ತೆರಳುತ್ತಿದ್ದ ಬಿಹಾರ ಮೂಲದ ಗರ್ಭಿಣಿ ಮಹಿಳೆಗೆ ಬಸ್‌ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ಚಾಲಕರು ಬಸ್ ನಿಲ್ಲಿಸಿದರು. ಬಸ್ ನಿರ್ವಾಹಕಿ ವಸಂತ ಹಾಗೂ ಬಸ್‌ನಲ್ಲಿದ್ದ ಬೆಂಗಳೂರು ಮೂಲದ ಮಹಿಳೆ ಹಾಗೂ ಪ್ರಯಾಣಿಕರು ಸಹಕರಿಸಿದರು.ನಂತರ 108 ಅಂಬ್ಯಲೆನ್ಸ್‌ಗೆ ಪ್ರಯಾಣಿಕ ಸೋಮಶೇಖರ್ ಅವರು ಕರೆ ಮಾಡಿದರು.
ಅಂಬ್ಯುಲೆನ್ಸ್‌ನಲ್ಲಿ ತಾಯಿ ಮಗುವನ್ನು ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿಕೊಟ್ಟ ನಿರ್ವಾಹಕಿ ವಸಂತ ಹಾಗೂ ಪ್ರಯಾಣಿಕರು ಆಸ್ಪತ್ರೆಗೆ ತೆರಳಿ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದರು.
ಕೆಎ-18 ಎಫ್-0865 ನಂಬರ್‌ನ ಸಾರಿಗೆ ಬಸ್
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು.
ಬಸ್‌ನ ಚಾಲಕ, ನಿರ್ವಾಹಕಿ ಹಾಗೂ ಪ್ರಯಾಣಿಕರ ಕಾರ್ಯಕ್ಕೆ ಸಾರ್ವಜನಿಕ ವಯಲದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.