10:29 AM Wednesday17 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಬಿಜೆಪಿಯ ಕೆಲವು ಗದ್ದಾರರಿಂದಲೇ ನನಗೆ ಸೋಲುಂಟಾಯಿತು: ಈಶ್ವರ ಸಿಂಗ್ ಠಾಕೂರ್ ಆಕ್ರೋಶ

14/05/2023, 17:59

ಬೀದರ್(reporterkarnataka.com): ಬಿಜೆಪಿಯ ಕೆಲವು ಗದ್ದಾರರಿಂದಲೇ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು.
ಅವರು ಇಂದು ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.

ತಮ್ಮ ವಿಶ್ವಾಸಕ್ಕೆ ಮತ್ತು ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿರುವ ಬಿಜೆಪಿಯ ಡಿಕೆ ಸಿದ್ರಾಮ್ ಹಾಗೂ ಇತರರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಮತ್ತು ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅಂತಹ ಮೋಸಗಾರರ ಪಟ್ಟಿ ತಯ್ಯಾರಿಸಿದ್ದು ಪಕ್ಷದ ವರಿಷ್ಠರಿಗೆ ಕಳಿಸಲಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿದ್ದೇನೆ ಅಲ್ಲದೇ ಆ ಪಟ್ಟಿ ಶೀಘ್ರವೇ ಬಿಡುಗಡೆ ಮಾಡುವೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಈಶ್ವರ್‍ ಸಿಂಗ್ ಠಾಕೂರ್ ಅವರು ಸೈಲೆಂಟ್ ಆಗಿದ್ದಾರೆ. ಮನೆ ಹೊರಗೆ ಬರುತ್ತಿಲ್ಲ ಎಂಬ ಇತ್ಯಾದಿ ಅಪ ಪ್ರಚಾರ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಮಿಥ್ಯ ಹೇಳಿಕೆ ನೀಡಿ ನೀಚತನದ ರಾಜಕಾರಣ ಮಾಡಿರುತ್ತಾರೆ ಎಂದು ಅವರು ಆರೋಪಿಸಿದರು.
ಜೆಡಿಎಸ್ ಅಭ್ಯರ್ಥಿ ಈ ಹಿಂದೆ ಎರಡು ಸಲ ಪಕ್ಷದ ಟಿಕೇಟ್ ಪಡೆದು ಸ್ಪರ್ದಿಸಿ ಸೋಲು ಅನುಭವಿಸಿದ್ದುಂಟು. ಅವರು ಪಕ್ಷಾಂತರಗೊಂಡು ಮೋಸಗೈದಿರುವರು ಎಂದ ಅವರು, ಬೀದರ ಕ್ಷೇತ್ರದ ಜನತೆ ತಮಗೆ ಮತ ನೀಡಿ ತಮ್ಮ ಜೊತೆ ಇದ್ದೇವೆ ಎಂದು ಸಾಬಿತು ಪಡಿಸಿದ್ದಾರೆ. ನನಗೆ ಮತದಾನ ಮಾಡಿರುವ ಸುಮಾರು 18 ಸಾವಿರ ಮಹಾ ಜನತೆಗೆ ಚಿರರುಣಿಯಾಗಿರುವೆ ಎಂದರು
ಈ ಕ್ಷಣದಿಂದ ಮುಂಬರುವ ಚುನಾವಣೆ ವರೆಗೆ ಸರ್ವ ಜನಾಂಗದ ಸುಖ ದುಖ:ಗಳಲ್ಲಿ ಭಾಗಿಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವೆ. ಅವರ ಪರವಾಗಿ ದಿನದ 24 ತಾಸುಗಳ ಕಾಲ ತಮ್ಮ ಮೊಬೈಲ್ ಚಾಲು ಇಡುವೆ. ಆದರೇ ಈಗಾಗಲೆ ಗೆದ್ದ ಅಭ್ಯರ್ಥಿ ಮತ್ತು ಸೋತ ಅಭ್ಯರ್ಥಿ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿರುತ್ತಾರೆ. ಹಾಲಿ ಮಂತ್ರಿ ಭಗವಂತ ಖೂಬಾ ಅವರು ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ತಾವು ಬೀದರ ಲೋಕ ಸಭಾ ಕ್ಷೇತ್ರಕ್ಕೆ ಟಿಕೇಟ್ ಕೆಳಲಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಾಟೀಲ್ ಅಲಿಯಾಬಾದ್, ವಿಶ್ವನಾಥ ಉಪ್ಪೆ, ಶಿವರಾಜಸಿಂಗ್ ಠಾಕೂರ್, ಉಮೇಶ ಕಟ್ಮೆ, ಮಹೇಶ್ವರ್ ಸ್ವಾಮಿ, ಅವರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು